ನಟ ಕಿಚ್ಚ ಸುದೀಪ್ ಜೊತೆ ಬಿಗ್‌ಬಾಸ್ ವಿನ್ನರ್ ಗಿಲ್ಲಿ
ಕೃಪೆ: ಎಕ್ಸ್ ಖಾತೆ
ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾದ ಬೆನ್ನಲ್ಲೇ ಗಿಲ್ಲಿ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ.
ಬಿಗ್‌ಬಾಸ್-12ನೇ ಆವೃತ್ತಿಯ ಫಿನಾಲೆ ವೇಳೆ ಶಿವರಾಜ್ ಕುಮಾರ್ ಅವರು ‘ಗಿಲ್ಲಿ ಅವರೇ ಗೆಲ್ಲುತ್ತಾರೆ‘ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸದ್ದು ಮಾಡಿತ್ತು.
ಅದರಂತೆಯೇ, ಬಿಗ್‌ಬಾಸ್ ಗೆದ್ದ ಸಂತಸದಲ್ಲಿ ಗಿಲ್ಲಿ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾಗಿರುವ ಗಿಲ್ಲಿ ಅವರಿಗೆ ಶಿವಣ್ಣ ಅವರು ಸಿಹಿ ತಿನಿಸಿ ಶುಭ ಹಾರೈಸಿದ್ದಾರೆ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಶಿವಣ್ಣನ ಜೊತೆ ಪೋಟೊ ಕ್ಲಿಕ್ಕಿಸಿಕೊಂಡ ಗಿಲ್ಲಿ ಅವರು, ‘ದೇವಸ್ಥಾನಕ್ಕೆ ಹೋದ್ರೆ ದೇವರು ಸಿಕ್ತಾರೆ. ದೊಡ್ಮನೆಗೆ ಬಂದ್ರೆ ಪ್ರೀತಿ ಸಿಗುತ್ತೆ. ಸರಳತೆಯ ಸಾಕಾರ ಮೂರ್ತಿಗಳ ಜೊತೆ ಒಂದು ಕ್ಲಿಕ್. ಲವ್ ಯು ಶಿವಣ್ಣ & ಗೀತಾ ಅಕ್ಕ’ ಎಂದು ಬರೆದುಕೊಂಡಿದ್ದಾರೆ.
ನಟ, ನಿರೂಪಕ ಕಿಚ್ಚ ಸುದೀಪ್ ಮನೆಗೆ ಭೇಟಿ ನಿಡಿದ ಗಿಲ್ಲಿ ಅವರು, ‘ಎತ್ತರದ ವ್ಯಕ್ತಿತ್ವ, ಅದಕ್ಕಿಂತ ಎತ್ತರ ಅವರ ಗುಣ. ಕೋಟಿ ಕನ್ನಡಿಗರ ಪ್ರೀತಿಯ ಸರದಾರ, ನಮ್ಮ ಸುದೀಪ್ ಅಣ್ಣನ ಜೊತೆ ಒಂದು ಸುಂದರ ಕ್ಷಣ’ ಎಂದು ಅಡಿಬಹರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.