
Mambally Royal Biscuit Factory
ಡಿಸೆಂಬರ್ ತಿಂಗಳಿನಲ್ಲಿ ಕೇಕ್‌ಗಳಿಗೆ ತುಂಬಾ ಬೇಡಿಕೆ ಇರುತ್ತದೆ. ಕೆಲವರು ಕ್ರಿಸ್‌ಮಸ್ ಆರಂಭದಿಂದ ಹೊಸವರ್ಷದವರೆಗೆ ಬಗೆಬಗೆಯ ಕೇಕ್‌ಗಳನ್ನು ಮನೆಯಲ್ಲಿಯೇ ತಯಾರಿಸಿ ಸವಿದರೆ, ಇನ್ನೂ ಕೆಲವರು ಬೇಕರಿಗಳಿಂದ ತಂದು ಸವಿಯುತ್ತಾರೆ. ಮಕ್ಕಳಿಗೆ ಕೇಕ್ ಅಂದರೆ ಅಚ್ಚುಮೆಚ್ಚು. ಅಷ್ಟಕ್ಕೂ ಈ ರುಚಿಕರವಾದ ಕೇಕ್ ರೆಸಿಪಿ ಭಾರತದಲ್ಲಿ ಆರಂಭವಾಗಿದ್ದು ಯಾವಾಗ? ಎಲ್ಲಿ ಆರಂಭವಾಯಿತು? ಎಂಬುದನ್ನು ನೋಡೋಣ.
ಭಾರತದಲ್ಲಿ ಮೊದಲ ಕೇಕ್ ತಯಾರಾಗಿದ್ದು 1883ರಲ್ಲಿ ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ. ಕೇರಳದ ತಲಶ್ಶೇರಿಯ ಮಾಂಬಳ್ಳಿ ಬಾಪು ಎಂಬುವವರು ಮೊದಲ ಬಾರಿಗೆ ಕೇಕ್ ತಯಾರಿಸಿದರು.
ಮಾಂಬಳ್ಳಿ ಬಾಪು ಭಾರತದಲ್ಲಿನ ಕೇಕ್ ಜನಕ ಎಂದರೆ ತಪ್ಪಾಗಲಾರದು. ಇವರು ರಾಯಲ್ ಬಿಸ್ಕಟ್ ಫ್ಯಾಕ್ಟರಿ ಎಂಬ ಬೇಕರಿಯನ್ನು ಆರಂಭಿಸಿದ್ದರು. ಈ ಬೇಕರಿ ಭಾರತದ ಅತ್ಯಂತ ಹಳೆಯ ಬೇಕರಿಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ಮೊದಲ ಪ್ಲಮ್ ಕೇಕ್ ತಯಾರಿಸಿದ ಕೀರ್ತಿ ಈ ಬೇಕರಿಗೆ ಸಲ್ಲುತ್ತದೆ.
ಬ್ರಿಟಿಷ್ ತೋಟಗಾರ ಮುರ್ಡೋಕ್ ಬ್ರೌನ್ ಅವರು ಇಂಗ್ಲೆಂಡಿನಿಂದ ಪ್ಲಮ್ ಕೇಕ್ ತಂದಿರುತ್ತಾರೆ. ಈ ರೀತಿಯಾದ ಕೇಕ್ ತಯಾರಿಸಲು ಮಾಂಬಳ್ಳಿ ಬಾಪು ಅವರಿಗೆ ಸಲಹೆ ನೀಡುತ್ತಾರೆ. ಇದರಿಂದಾಗಿ ಮಾಂಬಳ್ಳಿ ಬಾಪು ಅವರು, ಬರ್ಮಾಕ್ಕೆ ಭೇಟಿ ನೀಡಿ ತಮ್ಮ ರಾಯಲ್ ಬಿಸ್ಕಟ್ ಫ್ಯಾಕ್ಟರಿಯಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಪ್ಲಮ್ ಕೇಕ್ ತಯಾರಿಸುತ್ತಾರೆ.
ಬಾಪು ಪ್ಲಮ್ ಕೇಕ್ ಅನ್ನು ತಯಾರಿಸಲು ಸುಮಾರು 10 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಫ್ರೆಂಚ್ ಬ್ರಾಂಡಿ ಮತ್ತು ಸ್ಥಳೀಯ ಮಸಾಲೆಗಳನ್ನು ಬಳಸಿಕೊಂಡು ರುಚಿಕರವಾದ ಕೇಕ್ ಅನ್ನು ತಯಾರಿಸುತ್ತಾರೆ.
ಭಾಪು ಅವರು ಧರ್ಮಡಂನಲ್ಲಿರುವ ಕಮ್ಮಾರನಿಂದ ಅಚ್ಚನ್ನು ಖರೀದಿಸಿದರು. ದೇಶಿಯ ಮಸಾಲೆ ಪದಾರ್ಥಗಳಾದ ದಾಲ್ಚಿನ್ನಿ, ಜಾಯಿಕಾಯಿ ಮತ್ತು ಲವಂಗಗಳಂತಹ ಮಸಾಲೆಗಳನ್ನು ಬಳಸಿಕೊಂಡು ಸ್ಥಳೀಯವಾಗಿ ತಯಾರಿಸಿದ ಗೋಡಂಬಿ ಹಾಗೂ ಸೇಬಿನ ಮದ್ಯ ಹಾಗೂ ಕದಲಿಪಳಮ್ (ಸ್ಥಳೀಯ ಬಾಳೆಹಣ್ಣುಗಳ ಒಂದು ವಿಧ) ನೊಂದಿಗೆ ಮಿಶ್ರಣ ಮಾಡಿ ಕೇಕ್ ತಯಾರಿಸಿದರು. ಹೀಗೆ ತಯಾರಿಸಿದ ಕೇಕ್ ಗೆ ಬಾರಿ ಬೇಡಿಕೆ ಬಂದಿತು. 12 ಕೇಕ್‌ಗಳನ್ನು ಆರ್ಡರ್ ಮಾಡಿದರು. ಇದರೊಂದಿಗೆ ಭಾರತದಲ್ಲಿ ಕ್ರಿಸ್‌ಮಸ್ ಕೇಕ್‌ಗಳ ಸಂಪ್ರದಾಯ ಆರಂಭವಾಯಿತು.
ಬಾಪು ಸ್ಥಾಪಿಸಿದ ರಾಯಲ್ ಬಿಸ್ಕಟ್ ಫ್ಯಾಕ್ಟರಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಕಾರ್ಖಾನೆಯ 5ನೇ ತಲೆಮಾರಿನ ಮಾಲೀಕರಾದ ರೇಣುಕಾ ಬಾಲಾ ಅವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.