ADVERTISEMENT

28 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:59 IST
Last Updated 28 ಫೆಬ್ರುವರಿ 2026, 4:59 IST
<div class="paragraphs"><p>ಮುಖ 10 ಸುದ್ದಿಗಳು</p></div>

ಮುಖ 10 ಸುದ್ದಿಗಳು

   

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಇರಾನ್ ಅಪಾಯಕಾರಿ ದೇಶ, ಅದರ ವಿಚಾರದಲ್ಲಿ ದೊಡ್ಡ ನಿರ್ಧಾರ ಕೈಗೊಳ್ಳಬೇಕಿದೆ: ಟ್ರಂಪ್

ಟೆಕ್ಸಾಸ್: ಇರಾನ್ ಅತ್ಯಂತ ಕಠಿಣ ಮತ್ತು ಅಪಾಯಕಾರಿ ದೇಶವಾಗಿದ್ದು, ಪರಮಾಣು ಒಪ್ಪಂದ ಕುರಿತ ಮಾತುಕತೆಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸದ್ಯ ಪಶ್ಚಿಮ ಏಷ್ಯಾದಲ್ಲಿನ ಮಿಲಿಟರಿ ಸಂಘರ್ಷದ ಬದಲಿಗೆ ಶಾಂತಿ ಮಾರ್ಗದಲ್ಲಿ ಒಪ್ಪಂದಕ್ಕೆ ಬರುವುದು ನಮ್ಮ ಆದ್ಯತೆಯಾಗಿದೆ ಎಂದಿದ್ಧಾರೆ.

ADVERTISEMENT

ತಾಲಿಬಾನ್ ನಿರ್ಬಂಧಗಳಿಂದ ಮಹಿಳೆಯರ ಆರೋಗ್ಯಕ್ಕೆ ಆಪತ್ತು: ವಿಶ್ವಸಂಸ್ಥೆ

ಜಿನೀವಾ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಿಧಿಸಿರುವ ನಿರ್ಬಂಧಗಳಿಂದಾಗಿ, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಜೀವಕ್ಕೆ ಆಪತ್ತು ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಜುಲೈ ದಂಗೆ ವೇಳೆ ಕೊಲೆ: ಬಾಂಗ್ಲಾದ ಪದಚ್ಯುತ ಪ್ರಧಾನಿ ಹಸೀನಾ ವಿರುದ್ಧ ಆರೋಪ ಪಟ್ಟಿ

ಢಾಕಾ: ಬಾಂಗ್ಲಾದೇಶದಲ್ಲಿ 2024ರ ಜುಲೈನಲ್ಲಿ ನಡೆದ ವಿದ್ಯಾರ್ಥಿ ದಂಗೆಯ ವೇಳೆ ರಾಷ್ಟ್ರ ರಾಜಧಾನಿ ಢಾಕಾದಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿರುವ ಆರೋಪ ಪಟ್ಟಿಯಲ್ಲಿ, ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಸೇರಿದಂತೆ 25 ಜನರ ಹೆಸರನ್ನು ಸೇರಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಯುವತಿ ಮೇಲೆ ಪ್ರೇಮಿಯಿಂದ ಒಮ್ಮೆ, ನೆರವಾಗುವೆ ಎಂದವನಿಂದ ಮತ್ತೊಮ್ಮೆ ಅತ್ಯಾಚಾರ‌‌‌!

ಭುವನೇಶ್ವರ: ಯುವತಿಯೊಬ್ಬರ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣದ ಒಡಿಶಾದ ಜಗತಿಸಂಗ್‌ಪುರ ಜಿಲ್ಲೆಯಲ್ಲಿ ವರದಿಯಾಗಿದೆ.

ಸಾರಿಗೆ ನೌಕರರ ವರ್ಗಾವಣೆ: ಮಾರ್ಗಸೂಚಿ ರೂಪಿಸಲು ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ‘ನೌಕರರ ವರ್ಗಾವಣೆ ಕುರಿತಂತೆ ಮೂರು ತಿಂಗಳಲ್ಲಿ ಮಾರ್ಗಸೂಚಿ ಹೊರಡಿಸಿ’ ಎಂದು ಹೈಕೋರ್ಟ್‌, ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ (ಎನ್‌ಡಬ್ಲ್ಯುಆರ್‌ಟಿಸಿ) ನಿರ್ದೇಶಿಸಿದೆ.

ಟಿ20 ವಿಶ್ವಕಪ್: ಈಡನ್‌ಗಾರ್ಡನ್‌ನಲ್ಲಿ ರನ್‌ಹೊಳೆ ನಿರೀಕ್ಷೆ

ಕೋಲ್ಕತ್ತ: ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಣ ಭಾನುವಾರ ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯ ‘ಕ್ವಾರ್ಟರ್‌ಫೈನಲ್’ ಸ್ವರೂಪ ಪಡೆದಿದೆ. ಕೋಲ್ಕತ್ತದಲ್ಲಿ ಈ ಪಂದ್ಯ ನಡೆಯುತ್ತಿರುವ ಪಿಚ್‌ನಲ್ಲಿ ರನ್‌ಹೊಳೆ ಹರಿಯುವ ನಿರೀಕ್ಷೆಯಿದೆ.

ಟಿ20 ವಿಶ್ವಕಪ್‌ ಸೆಮಿಫೈನಲ್‌: ಪಾಕ್‌ಗೆ ಹೀಗಿದೆ ಲೆಕ್ಕಾಚಾರ

ಪಾಕಿಸ್ತಾನ ತಂಡವು ಶನಿವಾರ ನಡೆಯುವ ಎರಡನೇ ಗುಂಪಿನ ಸೂಪರ್ ಎಂಟರ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

ಕೊಚ್ಚಿ: ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಶುಕ್ರವಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ಪರಂಪರೆಯ ವೈಭವವನ್ನು ಸಾರುವ ಬಾಗಲಕೋಟೆ ಹೋಳಿ ಹಲಗೆ ಮೇಳ ಮಾರ್ಚ್ 1ರಂದು

ಬೆಂಗಳೂರು: ಉತ್ತರ ಕರ್ನಾಟಕದ ವೈಭವಮಯ ಸಂಸ್ಕೃತಿ ಪರಂಪರೆಯನ್ನು ಪ್ರತಿಧ್ವನಿಸುವ ಬಾಗಲಕೋಟೆ ಹೋಳಿ ಹಲಗೆ ಮೇಳ–2026 ಕಾರ್ಯಕ್ರಮವನ್ನು ಮಾರ್ಚ್ 1ರಂದು ಸಂಜೆ 5.30ಕ್ಕೆ ರಾಜಾಜಿನಗರ 2ನೇ ಬ್ಲಾಕ್‌ನಲ್ಲಿರುವ ಕೆ.ಎಲ್.ಇ. ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದೆ.

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ: ಎನ್‌ಡಿಎ– ಇಂಡಿಯಾ ಮೈತ್ರಿ ಎಚ್ಚರಿಕೆ ನಡೆ

ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳಿಗೆ ಮುನ್ನುಡಿ ಬರೆಯುವ ಸಾಧ್ಯತೆ ಇರುವುದಿಂದ, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟವು ಎಚ್ಚರಿಕೆಯಿಂದ ಕಣಕ್ಕಿಳಿಯಲು ನಿರ್ಧರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.