ADVERTISEMENT

ರಾಜ್ಯದಲ್ಲಿ ನಮಗೆ ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 10:28 IST
Last Updated 23 ಜುಲೈ 2019, 10:28 IST
   

ಬೆಂಗಳೂರು:‘ಮಾಧ್ಯಮದವರು ನಮ್ಮನ್ನು ಕಳ್ಳರುಎಂದು ಕರೆಯುತ್ತಿದ್ದಾರೆ. ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಮಂಗಳವಾರ ಅಳಲು ತೋಡಿಕೊಂಡರು.

ರಾಜಕಾರಣದ ತಾಜಾ ಅಪ್‌ಡೇಟ್ಸ್‌ಗೆhttp://bit.ly/2yf5kaxಲಿಂಕ್ ಕ್ಲಿಕ್ ಮಾಡಿ

ವಿಶ್ವಾಸಮತ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ನನ್ನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಬಿಜೆಪಿ ಸಂಚು ಹೂಡುತ್ತಿದೆ.​ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಾಸಮತಕ್ಕೆ ಬೇಕಿರುವ ಅಂಕಿ–ಅಂಶಗಳಲ್ಲಿ ಏರುಪೇರಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಪಕ್ಷೇತರ ಶಾಸಕರು ಹೇಗೆ ನಮ್ಮ ವಿರುದ್ಧ ಕೈ ಎತ್ತುತ್ತಾರೋ ನೋಡ್ತೀವಿ, 5–6 ಗಂಟೆ ವೇಳೆಗೆ ಎಲ್ಲ ಮುಕ್ತಾಯವಾಗಲಿದೆ.ರಾಜ್ಯಕ್ಕೆ ಕೆಟ್ಟ ನಿದರ್ಶನವನ್ನು ನೀವು ಕೊಡುತ್ತಿದ್ದೀರಿ. ಇಂದು ನಮಗಾದ ಪರಿಸ್ಥಿತಿ ನಾಳೆ ನಿಮಗೂ ಆಗಬಹುದು. ಯಡಿಯೂರಪ್ಪ ಅವರ ಛಲವನ್ನು ಮೆಚ್ಚಲೇಬೇಕು ಎಂದು ವ್ಯಂಗ್ಯವಾಡಿದರು.

‘ಹೂಡಿಕೆ ಮಾಡಲು ಯಾರ್‍ಯಾರು ಬರುತ್ತಾರೋ ಅವರಿಗೆಲ್ಲ ನಮ್ಮ ಸರ್ಕಾರ ಅವಕಾಶ ಮಾಡಿಕೊಡಲಿದೆ. ಹೂಡಿಕೆ ಸೆಳೆಯುವುದು, ಉದ್ಯೋಗ ಸೃಷ್ಟಿಯೇ ನಮ್ಮ ಆದ್ಯತೆ.ಜಿಂದಾಲ್ ವಿಚಾರದಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂಇಲ್ಲ. ಹೂಡಿಕೆ ಸೆಳೆಯುವ ಉದ್ದೇಶದಿಂದ ಒಪ್ಪಿಗೆ ಸೂಚಿಸಿದ್ದೆ ಅಷ್ಟೆ. ಆದರೂ ಲಂಚ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.