ADVERTISEMENT

Video | ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:26 IST
Last Updated 7 ಅಕ್ಟೋಬರ್ 2025, 4:26 IST

ಪಶ್ಚಿಮ ಘಟ್ಟದ ಆಗುಂಬೆ–ಸೋಮೇಶ್ವರ ಪ್ರದೇಶವು ಕಾಳಿಂಗ ಸರ್ಪಗಳ ಚೈತ್ರಭೂಮಿ. ಆದರೆ ಇಲ್ಲಿ ಸಂಶೋಧನೆ ಹೆಸರಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವನ್ಯಜೀವಿಪರ ಹೋರಾಟಗಾರರು ಆರೋಪಿಸಿದ್ದಾರೆ. ಕಾಳಿಂಗ ಸರ್ಪಗಳನ್ನು ಬಂಧನದಲ್ಲಿಟ್ಟು ಶೋಷಣೆ, ವಾಣಿಜ್ಯ ಚಟುವಟಿಕೆ, ರೆಸಾರ್ಟ್ ನಿರ್ಮಾಣ, ಕೃತಕ ಸಂತಾನೋತ್ಪತ್ತಿ – ಇವೆಲ್ಲವೂ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದು ವನ್ಯಜೀವಿಪರ ಹೋರಾಟಗಾರರ ಆರೋಪ. ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಈಗ ತನಿಖೆಗೆ ಆದೇಶಿಸಿದ್ದಾರೆ. ಅರಣ್ಯಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ ಸಂಪೂರ್ಣ ವಿವರ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.