ADVERTISEMENT

IPL 2025 | ಕೊಹ್ಲಿ ಮೇಲೆ ಅವಲಂಬಿತವಾಗಿದೆಯೇ ಆರ್‌ಸಿಬಿ: CSK ಕೋಚ್ ಹೇಳಿದ್ದೇನು?

ಏಜೆನ್ಸೀಸ್
Published 28 ಮಾರ್ಚ್ 2025, 6:53 IST
Last Updated 28 ಮಾರ್ಚ್ 2025, 6:53 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರ

ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಎದುರು ಇಂದು (ಮಾರ್ಚ್ 28) ರಾತ್ರಿ ನಡೆಯಲಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ವಿರಾಟ್‌ ಕೊಹ್ಲಿ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆಯೇ ಎಂಬ ಬಗ್ಗೆ ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭದಿಂದಲೂ ಆರ್‌ಸಿಬಿ ಪರ ಆಡುತ್ತಿರುವ ಕೊಹ್ಲಿ, ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಈ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಅಜೇಯ 59 ರನ್‌ ಗಳಿಸಿದ್ದ ಅವರು, ಆರ್‌ಸಿಬಿ ಸುಲಭ ಗೆಲುವು ಸಾಧಿಸಲು ನೆರವಾಗಿದ್ದರು.

ಸಿಎಸ್‌ಕೆ vs ಆರ್‌ಸಿಬಿ ಹಣಾಹಣಿ, ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಸಿಎಸ್‌ಕೆ ತಂಡದ ಕೋಚ್‌ ಆಗಿರುವ ಅವರು ಫ್ಲೆಮಿಂಗ್‌ ಅವರನ್ನು ಪಂದ್ಯದ ಮುನ್ನಾದಿನ, ಚೆನ್ನೈನಲ್ಲಿ ಕೊಹ್ಲಿ ಹಾಗೂ ನಾಯಕ ರಜತ್‌ ಪಾಟೀದಾರ್‌ ಅವರ ಮೇಲೆ ಆರ್‌ಸಿಬಿ ಅವಲಂಬಿತವಾಗಿದೆಯೇ ಎಂಬ ಬಗ್ಗೆ ಕೇಳಲಾಗಿದೆ.

ಇದಕ್ಕೆ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಎರಡೂ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೇವಲ ಒಂದೊಂದು ಪಂದ್ಯವನ್ನಷ್ಟೇ ಆಡಿವೆ. ಈಗಲೇ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಠ. ನಮ್ಮ ತಂಡವು ಹಿಂದಿನ ಫಲಿತಾಂಶಗಳ ಬಗ್ಗೆ ಗಮನಹರಿಸುವುದಿಲ್ಲ. ಆದರೆ, ಆರ್‌ಸಿಬಿಯ ಯೋಜನೆಗಳಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದಿದ್ದಾರೆ.

ಇದೇ ವೇಳೆ, ಈ ವರ್ಷ ಸಮಬಲದ ಹೋರಾಟವಿದೆ ಎಂದಿರುವ ಅವರು, ಕೊಹ್ಲಿ ಮತ್ತು ರಜತ್‌ ಅವರಿಗೆ ಹೆಚ್ಚು ರನ್‌ ಗಳಿಸಲು ಅವಕಾಶ ನೀಡದಿದ್ದರೆ, ಸಿಎಸ್‌ಕೆ ಜಯ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಸ್‌ಕೆ ವಿರುದ್ಧ ಈವರೆಗೆ 33 ಪಂದ್ಯಗಳ 32 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, 9 ಅರ್ಧಶತಕ ಸಹಿತ 1,053 ರನ್‌ ಕಲೆಹಾಕಿದ್ದಾರೆ.

ಬಲಾಬಲ
ಉಭಯ ತಂಡಗಳು ಈವರೆಗೆ 33 ಸಲ ಮುಖಾಮುಖಿಯಾಗಿವೆ. ಅದರಲ್ಲಿ ಆರ್‌ಸಿಬಿ ಗೆದ್ದಿರುವುದು ಕೇವಲ 11 ಸಲ. ಉಳಿದಂತೆ 21 ಬಾರಿ ಸಿಎಸ್‌ಕೆ ಮೇಲುಗೈ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಸಿಎಸ್‌ಕೆಯನ್ನು 2008ರಲ್ಲಿ ಚೆನ್ನೈನಲ್ಲಿ ಸೋಲಿಸಿದ್ದ ಆರ್‌ಸಿಬಿ, ಆ ಬಳಿಕ ಅದರ ತವರಿನ ಅಂಗಳದಲ್ಲಿ ಒಮ್ಮೆಯೂ ಗೆದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.