ADVERTISEMENT

IPL ನಾಳೆ ಪುನರಾರಂಭ: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚಿದವರ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2025, 10:06 IST
Last Updated 16 ಮೇ 2025, 10:06 IST
<div class="paragraphs"><p>ವಿರಾಟ್ ಕೊಹ್ಲಿ, ಶುಭಮನ್‌ ಗಿಲ್‌, ಜಾಸ್‌ ಬಟ್ಲರ್‌, ಪ್ರಸಿದ್ಧ ಕೃಷ್ಣ, ಜೋಶ್‌ ಹ್ಯಾಜಲ್‌ವುಡ್‌ ಹಾಗೂ ನೂರ್‌ ಅಹ್ಮದ್‌</p></div>

ವಿರಾಟ್ ಕೊಹ್ಲಿ, ಶುಭಮನ್‌ ಗಿಲ್‌, ಜಾಸ್‌ ಬಟ್ಲರ್‌, ಪ್ರಸಿದ್ಧ ಕೃಷ್ಣ, ಜೋಶ್‌ ಹ್ಯಾಜಲ್‌ವುಡ್‌ ಹಾಗೂ ನೂರ್‌ ಅಹ್ಮದ್‌

   

ರಾಯಿಟರ್ಸ್‌ ಹಾಗೂ ಪಿಟಿಐ ಚಿತ್ರಗಳು

ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟಿ20 ಕ್ರಿಕೆಟ್ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದೆ. ಭಾರತ–ಪಾಕಿಸ್ತಾನ ಸಂಘರ್ಷದ ಕಾರಣಕ್ಕೆ ಒಂದು ವಾರದ ಮಟ್ಟಿಗೆ ಮುಂದೂಡಿಕೆಯಾಗಿದ್ದ ಈ ಟೂರ್ನಿ, ನಾಳೆಯಿಂದ (ಮೇ 17) ಪುನರಾರಂಭಗೊಳ್ಳಲಿದೆ.

ADVERTISEMENT

ಗುಜರಾತ್‌ ಟೈಟನ್ಸ್‌ (ಜಿಟಿ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌), ಮುಂಬೈ ಇಂಡಿಯನ್ಸ್‌ (ಎಂಐ), ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ), ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌), ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ಪಾಯಿಂಟ್‌ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಏಳು ಸ್ಥಾನಗಳಲ್ಲಿದ್ದು, ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ. ನಂತರದ ಮೂರು ಸ್ಥಾನಗಳಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌), ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮುಂದಿನ ಹಂತಕ್ಕೇರುವ ಅವಕಾಶ ಕಳೆದುಕೊಂಡಿವೆ. ಹೀಗಾಗಿ, ಲೀಗ್‌ ಹಂತದಲ್ಲಿ ಬಾಕಿ ಇರುವ ಪಂದ್ಯಗಳನ್ನು ಔಪಚಾರಿಕವಾಗಿ ಆಡಿ ಮುಗಿಸಲಿವೆ.

ಮುಂಬೈ, ಕೋಲ್ಕತ್ತ, ರಾಜಸ್ಥಾನ ಹಾಗೂ ಚೆನ್ನೈ ತಂಡಗಳು ಲೀಗ್‌ ಹಂತದಲ್ಲಿ ತಲಾ 12 ಪಂದ್ಯಗಳನ್ನು ಆಡಿದ್ದು, ಇನ್ನೆರಡು ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿಯಲಿವೆ. ಉಳಿದ ತಂಡಗಳಿಗೆ ಇನ್ನೂ ತಲಾ ಮೂರು ಪಂದ್ಯಗಳಿವೆ.

ಮೊದಲ ಹಂತದ ಪಂದ್ಯಗಳಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ಸಾಧನೆ ತೋರಿದ ಆಟಗಾರರ ವಿವರ ಇಲ್ಲಿದೆ.

ಬ್ಯಾಟರ್‌ಗಳ ವಿಭಾಗ

ಆರೆಂಜ್‌ ಕ್ಯಾಪ್‌ ರೇಸ್‌: ಹೆಚ್ಚು ರನ್‌ ಗಳಿಸಿದವರು

  1. ಸೂರ್ಯಕುಮಾರ್‌ ಯಾದವ್‌ (ಮುಂಬೈ): 510 ರನ್‌, 12 ಪಂದ್ಯ

  2. ಸಾಯಿ ಸುದರ್ಶನ್‌ (ಗುಜರಾತ್‌): 509 ರನ್‌, 11 ಪಂದ್ಯ

  3. ಶುಭಮನ್‌ ಗಿಲ್‌ (ಗುಜರಾತ್‌): 508 ರನ್‌, 11 ಪಂದ್ಯ

  4. ವಿರಾಟ್‌ ಕೊಹ್ಲಿ (ಬೆಂಗಳೂರು): 505 ರನ್‌, 11 ಪಂದ್ಯ

  5. ಜಾಸ್‌ ಬಟ್ಲರ್‌ (ಗುಜರಾತ್‌): 500 ರನ್‌, 11 ಪಂದ್ಯ

ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್‌ಗಳು

  1. ಸಾಯಿ ಸುದರ್ಶನ್‌ (ಗುಜರಾತ್‌): 56 ಬೌಂಡರಿ, 11 ಪಂದ್ಯ

  2. ಸೂರ್ಯಕುಮಾರ್‌ ಯಾದವ್‌ (ಮುಂಬೈ): 51 ಬೌಂಡರಿ, 12 ಪಂದ್ಯ

  3. ಶುಭಮನ್‌ ಗಿಲ್‌ (ಗುಜರಾತ್‌): 51 ಬೌಂಡರಿ, 11 ಪಂದ್ಯ

  4. ಜಾಸ್‌ ಬಟ್ಲರ್‌ (ಗುಜರಾತ್‌): 49 ಬೌಂಡರಿ, 11 ಪಂದ್ಯ

  5. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ): 46 ಬೌಂಡರಿ, 12 ಪಂದ್ಯ

ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್‌ಗಳು

  1. ನಿಕೋಲಸ್‌ ಪೂರನ್‌ (ಲಖನೌ): 34 ಸಿಕ್ಸರ್, 11 ಇನಿಂಗ್ಸ್‌

  2. ಶ್ರೇಯಸ್‌ ಅಯ್ಯರ್‌ (ಪಂಜಾಬ್‌): 27 ಸಿಕ್ಸರ್, 11 ಇನಿಂಗ್ಸ್‌

  3. ಸೂರ್ಯಕುಮಾರ್‌ ಯಾದವ್‌ (ಮುಂಬೈ): 26 ಸಿಕ್ಸರ್, 12 ಇನಿಂಗ್ಸ್‌

  4. ರಿಯಾನ್‌ ಪರಾಗ್‌ (ರಾಜಸ್ಥಾನ): 26 ಸಿಕ್ಸರ್, 12 ಇನಿಂಗ್ಸ್‌

  5. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ): 25 ಸಿಕ್ಸರ್, 12 ಇನಿಂಗ್ಸ್‌

ಅತಿಹೆಚ್ಚು ಅರ್ಧಶತಕ

  1. ವಿರಾಟ್‌ ಕೊಹ್ಲಿ (ಬೆಂಗಳೂರು): 7 ಅರ್ಧಶತಕ, 11 ಪಂದ್ಯ

  2. ಜಾಸ್‌ ಬಟ್ಲರ್‌ (ಗುಜರಾತ್‌): 5 ಅರ್ಧಶತಕ, 11 ಪಂದ್ಯ

  3. ಶುಭಮನ್‌ ಗಿಲ್‌ (ಗುಜರಾತ್‌): 5 ಅರ್ಧಶತಕ, 11 ಪಂದ್ಯ

  4. ಸಾಯಿ ಸುದರ್ಶನ್‌ (ಗುಜರಾತ್‌): 5 ಅರ್ಧಶತಕ, 11 ಪಂದ್ಯ

  5. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ):  5 ಅರ್ಧಶತಕ, 12 ಇನಿಂಗ್ಸ್‌

ಇನಿಂಗ್ಸ್‌ನಲ್ಲಿ ಗರಿಷ್ಠ ರನ್‌

  1. ಅಭಿಷೇಕ್‌ ಶರ್ಮಾ (ಹೈದರಾಬಾದ್‌): 141 ರನ್‌ vs ಪಂಜಾಬ್‌

  2. ಪ್ರಿಯಾಂಶ್‌ ಆರ್ಯಾ (ಪಂಜಾಬ್‌): 103 ರನ್‌ vs ಚೆನ್ನೈ

  3. ಇಶಾನ್‌ ಕಿಶನ್‌ (ಹೈದರಾಬಾದ್‌): ಅಜೇಯ 106 ರನ್‌ vs ರಾಜಸ್ಥಾನ

  4. ವೈಭವ್‌ ಸೂರ್ಯವಂಶಿ (ರಾಜಸ್ಥಾನ): 101 ರನ್‌ vs ಗುಜರಾತ್

ವೇಗದ ಶತಕ

  1. ವೈಭವ್‌ ಸೂರ್ಯವಂಶಿ (ರಾಜಸ್ಥಾನ): 35 ಎಸೆತ

  2. ಪ್ರಿಯಾಂಶ್‌ ಆರ್ಯಾ (ಪಂಜಾಬ್‌): 39 ಎಸೆತ

  3. ಅಭಿಷೇಕ್‌ ಶರ್ಮಾ (ಹೈದರಾಬಾದ್‌): 40 ಎಸೆತ

  4. ಇಶಾನ್‌ ಕಿಶನ್‌ (ಹೈದರಾಬಾದ್‌): 45 ಎಸೆತ

ವೇಗದ ಅರ್ಧಶತಕಗಳು

  1. ರೊಮಾರಿಯೊ ಶೆಫರ್ಡ್‌ (ಬೆಂಗಳೂರು): 14 ಎಸೆತ vs ಚೆನ್ನೈ

  2. ವೈಭವ್‌ ಸೂರ್ಯವಂಶಿ (ರಾಜಸ್ಥಾನ): 17 ಎಸೆತ vs ಗುಜರಾತ್

  3. ನಿಕೋಲಸ್‌ ಪೂರನ್‌ (ಲಖನೌ): 18 ಎಸೆತ vs ಹೈದರಾಬಾದ್‌

  4. ಪ್ರಿಯಾಂಶ್‌ ಆರ್ಯಾ (ಪಂಜಾಬ್‌): 19 ಎಸೆತ  vs ಚೆನ್ನೈ

  5. ಅಭಿಷೇಕ್‌ ಶರ್ಮಾ (ಹೈದರಾಬಾದ್‌): 19 ಎಸೆತ vs ಪಂಜಾಬ್‌

ಬೌಲರ್‌ಗಳ ವಿಭಾಗ

ಪರ್ಪಲ್‌ ಕ್ಯಾಪ್‌ ರೇಸ್‌: ಹೆಚ್ಚು ವಿಕೆಟ್‌ ಪಡೆದವರು

  1. ಪ್ರಸಿದ್ಧ ಕೃಷ್ಣ (ಗುಜರಾತ್‌): 20 ವಿಕೆಟ್‌, 11 ಪಂದ್ಯ

  2. ನೂರ್‌ ಅಹ್ಮದ್‌ (ಚೆನ್ನೈ): 20 ವಿಕೆಟ್‌, 12 ಪಂದ್ಯ

  3. ಜೋಶ್‌ ಹ್ಯಾಜಲ್‌ವುಡ್‌ (ಬೆಂಗಳೂರು): 18 ವಿಕೆಟ್‌, 10 ಪಂದ್ಯ

  4. ಟ್ರೆಂಟ್‌ ಬೌಲ್ಟ್ (ಮುಂಬೈ): 18 ವಿಕೆಟ್‌, 12 ಪಂದ್ಯ

  5. ವರುಣ್‌ ಚಕ್ರವರ್ತಿ (ಕೋಲ್ಕತ್ತ): 17 ವಿಕೆಟ್‌, 12 ಪಂದ್ಯ

ಹೆಚ್ಚು ಡಾಟ್‌ ಬಾಲ್‌ ಎಸೆದವರು

  1. ಖಲೀಲ್‌ ಅಹ್ಮದ್‌ (ಚೆನ್ನೈ): 12 ಪಂದ್ಯ, 119 ಡಾಟ್‌ ಬಾಲ್‌ಗಳು

  2. ವರುಣ್‌ ಚಕ್ರವರ್ತಿ (ಕೋಲ್ಕತ್ತ): 12 ಪಂದ್ಯ, 115 ಡಾಟ್‌ ಬಾಲ್‌ಗಳು

  3. ಮೊಹಮ್ಮದ್‌ ಸಿರಾಜ್‌ (ಗುಜರಾತ್‌): 11 ಪಂದ್ಯ, 114 ಡಾಟ್‌ ಬಾಲ್‌ಗಳು

  4. ಪ್ರಸಿದ್ಧ ಕೃಷ್ಣ (ಗುಜರಾತ್‌): 11 ಪಂದ್ಯ, 112 ಡಾಟ್‌ ಬಾಲ್‌ಗಳು

  5. ಜೋಫ್ರಾ ಆರ್ಚರ್‌ (ರಾಜಸ್ಥಾನ): 12 ಪಂದ್ಯ, 110 ಡಾಟ್ ಬಾಲ್‌ಗಳು

ಇನಿಂಗ್ಸ್‌ವೊಂದರಲ್ಲಿ ಬೆಸ್ಟ್‌ ಬೌಲಿಂಗ್‌

  1. ಮಿಚೇಲ್‌ ಸ್ಟಾರ್ಕ್‌ (ಡೆಲ್ಲಿ): 35ಕ್ಕೆ 5 vs ಹೈದರಾಬಾದ್‌

  2. ಹಾರ್ದಿಕ್‌ ಪಾಂಡ್ಯ (ಮುಂಬೈ): 36ಕ್ಕೆ 5 vs ಲಖನೌ

  3. ಮೊಹಮ್ಮದ್‌ ಸಿರಾಜ್‌ (ಗುಜರಾತ್‌): 17ಕ್ಕೆ 4 vs ಹೈದರಾಬಾದ್‌

  4. ನೂರ್‌ ಅಹ್ಮದ್‌ (ಚೆನ್ನೈ): 18ಕ್ಕೆ 4 vs ಮುಂಬೈ

  5. ಜಸ್‌ಪ್ರೀತ್‌ ಬೂಮ್ರಾ (ಮುಂಬೈ): 22ಕ್ಕೆ 4 vs ಲಖನೌ

ಅತಿಹೆಚ್ಚು ಕ್ಯಾಚ್‌ ಪಡೆದ ಫೀಲ್ಡರ್‌ಗಳು

  1. ನಮನ್‌ ಧಿರ್‌ (ಮುಂಬೈ): 12 ಪಂದ್ಯ, 12 ಕ್ಯಾಚ್‌

  2. ಶಿಮ್ರೋನ್‌ ಹೆಟ್ಮೆಯರ್‌ (ರಾಜಸ್ಥಾನ): 12 ಪಂದ್ಯ, 10 ಕ್ಯಾಚ್‌

  3. ನಿಕೋಲಸ್‌ ಪೂರನ್‌ (ಲಖನೌ): 11 ಪಂದ್ಯ, 8 ಕ್ಯಾಚ್‌

  4. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ): 12 ಪಂದ್ಯ, 8 ಕ್ಯಾಚ್‌

  5. ರಿಂಕು ಸಿಂಗ್‌ (ಕೋಲ್ಕತ್ತ):  12 ಪಂದ್ಯ, 8 ಕ್ಯಾಚ್‌

ಈ ಬಾರಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ ಏಕೈಕ ಬೌಲರ್‌ ಪಂಜಾಬ್‌ನ ಯಜುವೇಂದ್ರ ಚಾಹಲ್‌. ಅವರು, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಹಾಗೆಯೇ, ಪಂಜಾಬ್‌ನ ಆರ್ಶದೀಪ್‌ ಸಿಂಗ್‌, ರಾಜಸ್ಥಾನದ ಜೋಫ್ರಾ ಆರ್ಚರ್‌, ಡೆಲ್ಲಿಯ ಮುಕೇಶ್‌ ಕುಮಾರ್‌ ಮತ್ತು ಕೋಲ್ಕತ್ತದ ಮೋಯಿನ್ ಅಲಿ, ವೈಭವ್‌ ಅರೋರಾ ಅವರು ತಲಾ ಒಂದೊಂದು ಓವರ್‌ ಮೇಡನ್‌ ಎಸೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.