ADVERTISEMENT

IPL 2025 | ವೇಗವಾಗಿ 4,000 ರನ್; ದಿಗ್ಗಜರ ಸಾಲಿಗೆ ಸೂರ್ಯಕುಮಾರ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2025, 11:33 IST
Last Updated 27 ಏಪ್ರಿಲ್ 2025, 11:33 IST
<div class="paragraphs"><p>ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ವೈಖರಿ</p></div>

ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ವೈಖರಿ

   

ಪಿಟಿಐ ಚಿತ್ರ

ಮುಂಬೈ: ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರು ಐಪಿಎಲ್‌ನಲ್ಲಿ 4,000 ರನ್ ಪೂರೈಸಿದ ಸಾಧನೆ ಮಾಡಿದರು.

ADVERTISEMENT

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಸೂರ್ಯ, ದಿಗ್ಗಜರ ಸಾಲಿಗೆ ಸೇರಿದರು.

ಈ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ಅವರು ತಲಾ ನಾಲ್ಕು ಬೌಂಡರಿ, ಸಿಕ್ಸರ್‌ ಸಹಿತ 54 ರನ್‌ ಬಾರಿಸಿ ಔಟಾದರು.

ಐಪಿಎಲ್‌ನಲ್ಲಿ ಇದುವರೆಗೆ 160 ಪಂದ್ಯಗಳ 145 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಸೂರ್ಯ, 27 ಶತಕ ಹಾಗೂ 2 ಶತಕ ಸಹಿತ 4,021 ರನ್‌ ಬಾರಿಸಿದ್ದಾರೆ. 33.91ರ ಸರಾಸರಿ ಹೊಂದಿರುವ ಅವರು, 147.56ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ.

ಎಸೆತಗಳ ಆಧಾರದಲ್ಲಿ 3ನೇ ಸ್ಥಾನ

ಐಪಿಎಲ್‌ನಲ್ಲಿ 4 ಸಾವಿರ ರನ್ ಗಳಿಸಿದ 17ನೇ ಬ್ಯಾಟರ್‌ ಎನಿಸಿರುವ ಸೂರ್ಯ, ಎಸೆತಗಳ ಆಧಾರದಲ್ಲಿ ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ತಾವೆದುರಿಸಿದ 2,705ನೇ ಎಸೆತದಲ್ಲಿ ನಾಲ್ಕು ಸಹಸ್ರ ರನ್‌ ಗಡಿ ದಾಟಿದ ಸೂರ್ಯ, ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ (2,653 ಎಸೆತ) ಮತ್ತು ದಕ್ಷಿಣ ಆಫ್ರಿಕಾದ 'ಮಿಸ್ಟರ್‌ 360' ಎಬಿ ಡಿ ವಿಲಿಯರ್ಸ್‌ (2,658 ಎಸೆತ) ನಂತರದ ಸ್ಥಾನದಲ್ಲಿದ್ದಾರೆ.

ಒಟ್ಟಾರೆ ಐಪಿಎಲ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 261 ಪಂದ್ಯಗಳ 253 ಇನಿಂಗ್ಸ್‌ಗಳಲ್ಲಿ 8,396 ರನ್‌ ಗಳಿಸಿದ್ದಾರೆ. ಭಾರತದವರೇ ಆದ ರೋಹಿತ್‌ ಶರ್ಮಾ (6,868) ಮತ್ತು ಶಿಖರ್‌ ಧವನ್‌ (6,769) ನಂತರದ ಸ್ಥಾನಗಳಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.