ADVERTISEMENT

ಯಾರಾಗಲಿದ್ದಾರೆ ಟೀಂ ಇಂಡಿಯಾ ಕೋಚ್‌? ಸಂದರ್ಶನಕ್ಕೆ ಆರು ಮಂದಿ ಹೆಸರು ಅಂತಿಮ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 5:56 IST
Last Updated 13 ಆಗಸ್ಟ್ 2019, 5:56 IST
ಚಿತ್ರ: ಬಿಸಿಸಿಐ ಟ್ವಿಟರ್‌
ಚಿತ್ರ: ಬಿಸಿಸಿಐ ಟ್ವಿಟರ್‌   

ನವದೆಹಲಿ: ಭಾರತದ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ರವಿ ಶಾಸ್ತ್ರಿ, ಆಸ್ಟ್ರೇಲಿಯಾದ ಟಾಮ್‌ ಮೂಡಿ ಸೇರಿದಂತೆ ಆರು ಮಂದಿ ಹೆಸರುಗಳನ್ನು ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಸಂದರ್ಶನಕ್ಕೆ ಆಯ್ಕೆ ಮಾಡಿದೆ.

ವೆಸ್ಟ್ ಇಂಡೀಸ್‌ ವಿರುದ್ಧದ ಸರಣಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇತ್ತೀಚೆಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೋಚ್ ಹುದ್ದೆಗೆ ಅರ್ಜಿ ಕರೆದಿತ್ತು.

ಈ ಮಧ್ಯೆ, ರವಿ ಶಾಸ್ತ್ರಿ ಅವರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಒಲವು ತೋರಿದ್ದರೂ ಕೋಚ್‌ ಹುದ್ದೆಗೆ ಟಾಮ್‌ ಮೂಡಿ ಜತೆ, ನ್ಯೂಜಿಲೆಂಡ್‌ನ ಮಾಜಿ ಕೋಚ್‌ ಮೈಕ್‌ ಹೆಸ್ಸೊನ್‌, ಶ್ರೀಲಂಕಾ ತಂಡದ ಮಾಜಿ ಆಟಗಾರ ಮಹೇಲ ಜಯವರ್ಧನೆ, ಭಾರತ ತಂಡದ ಮಾಜಿ ಆಲ್‌ರೌಂಡರ್‌ ರಾಬಿನ್‌ ಸಿಂಗ್‌, ಜಿಂಬಾಬ್ವೆ ತಂಡದ ಕೋಚ್‌ ಲಾಲ್‌ಚಂದ್‌ ರಜಪೂತ್‌ ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಸಿಎಸಿಅರ್ಜಿ ಪರಿಶೀಲನೆ ನಡೆಸಿದ ಬಳಿಕ ರವಿಶಾಸ್ತ್ರಿ, ಟಾಮ್‌ ಮೂಡಿ, ಮೈಕ್‌ ಹೆಸ್ಸೊನ್‌, ಅಫ್ಗಾನಿಸ್ತಾನ ಕೋಚ್‌ ಫಿಲ್ ಸಿಮನ್ಸ್, ರಾಬಿನ್‌ ಸಿಂಗ್, ಲಾಲ್‌ಚಂದ್‌ ರಜಪೂತ್‌ ಹೆಸರುಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಿದ್ದು,ಮುಂದಿನ ವಾರದೊಳಗೆ ಕೋರ್ಚ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ‘ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗುವ ಇಚ್ಛೆಯಿದೆ’ ಎಂದು ಹೇಳಿಕೊಂಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.