Union Budget 2026 LIVE: ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್ ರೈಲು ಯೋಜನೆ ಘೋಷಣೆ
ಪ್ರಜಾವಾಣಿ ವೆಬ್ ಡೆಸ್ಕ್
Published 1 ಫೆಬ್ರುವರಿ 2026, 6:05 IST
Last Updated 1 ಫೆಬ್ರುವರಿ 2026, 6:05 IST
ಕೇಂದ್ರ ಬಜೆಟ್ (ಸಚಿವೆ ನಿರ್ಮಲಾ ಸೀತಾರಾಮನ್)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿ ಚಾರಿತ್ರಿಕ ದಾಖಲೆ ಬರೆಯಲು ಅಣಿಯಾಗಿದ್ದಾರೆ. ಇಂದು ಬೆಳಿಗ್ಗೆ 11ಗಂಟೆಗೆ ಸಂಸತ್‌ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಮೀಸಲು ವ್ಯಾಪಾರ ಕಾರಿಡಾರ್ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲಾಗುವುದು. ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಉದ್ದೇಶ. ಜತೆಗೆ ಕರಾವಳಿ ಕಾರ್ಗೊ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ ತರಲಾಗುವುದು.
ADVERTISEMENT
ಮೆಡಿಕಲ್ ಹಬ್ ಘೋಷಣೆ - ಐದು ಪ್ರಾದೇಶಿಕ, ಖಾಸಗಿ ಸಹಭಾಗ್ವಿತ
ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್ ರೈಲು ಯೋಜನೆ ಘೋಷಣೆ
ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಚೆನ್ನೈ, ಬೆಂಗಳೂರು–ಚೆನ್ನೈ, ದೆಹಲಿ–ವಾರಣಾಸಿ, ವಾರಣಾಸಿ–ಸಿಲಿಗುರಿ. ಈ ಯೋಜನೆ ಮೂಲಕ ಪ್ರಯಾಣ ಸಮಯ ಕಡಿಮೆ ಮಾಡುವ ಯೋಜನೆ.
ಒಡಿಶಾ, ಕೇರಳ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಖನಿಜಗಳ ಉತ್ಪಾದನೆಗೆ ಉತ್ತೇಜನ: ನಿರ್ಮಲಾ
ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ನಿರ್ಮಲಾ ಪ್ರಸ್ತಾಪ
ಭಾರತವು ಗುಣಮಟ್ಟದ, ಕೈಗೆಟುಕುವ ಕ್ರೀಡಾ ಸಾಮಾಗ್ರಿಗಳ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ: ನಿರ್ಮಲಾ
200 ಪ್ರಮುಖ ಕೈಗಾರಿಕಾ ಕ್ಲಸ್ಟರ್‌ಗಳ ನವೀಕರಣ: ನಿರ್ಮಲಾ ಘೋಷಣೆ
ಜಾಗತಿಕ ಬಯೋ-ಫಾರ್ಮಾ ಉತ್ಪಾದನಾ ಕೇಂದ್ರ
ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ₹10 ಸಾವಿರ ಕೋಟಿ ಬಯೋ ಫಾರ್ಮಾ ಶಕ್ತಿ ಅನ್ನು ನಿರ್ಮಲಾ ಪ್ರಸ್ತಾಪಿಸಿದ್ದಾರೆ.
ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಎಂದು ನಿರ್ಮಲಾ ಘೋಷಣೆ
ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ: ನಿರ್ಮಲಾ
ಸುಸ್ಥಿರ ಬೆಳವಣಿಗೆ ಜೊತೆಗೆ ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಧ್ಯೇಯವಾಗಿದೆ: ನಿರ್ಮಲಾ
12 ವರ್ಷಗಳ ಅಧಿಕಾರದಿಂದ ದೇಶದ ಆರ್ಥಿಕತೆ ಸ್ಥಿರತೆ ಕಂಡಿದ್ದು, ಹಣಕಾಸಿನ ಶಿಸ್ತು ಹಾಗೂ ನಿರಂತರ ಪ್ರಗತಿ ಸಾಧಿಸಿದೆ. ಅನಿಶ್ಚಿತತೆಗಳ ನಡುವೆಯೂ ಪ್ರಗತಿ ಸಾಧಿಸಿದ್ದೇವೆ: ನಿರ್ಮಲಾ
ದೇಶದ ಪ್ರತಿಯೊಬ್ಬ ನಾಗರಿಕರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಯುವಜನರಿಗೆ ವೃದ್ಧಿಯನ್ನು ಖಾತ್ರಿಪಡಿಸಲಿದ್ದೇವೆ: ಬಜೆಟ್ ಭಾಷಣದಲ್ಲಿ ನಿರ್ಮಲಾ
ವಿಕಸಿತ ಭಾರತದತ್ತ ಹೆಜ್ಜೆ ಇಡುವುದು ಮುಂದುವರಿಯಲಿದೆ: ನಿರ್ಮಲಾ
ಮೂರು ಕರ್ತವ್ಯಗಳ ಬಗ್ಗೆ ನಿರ್ಮಲಾ ಉಲ್ಲೇಖ
ಆರ್ಥಿಕ ಪ್ರಗತಿ
ಜನರ ನಿರೀಕ್ಷೆ ಈಡೇರಿಸುವುದು
ಸಬ್ ಕಾ ಸಾಥ್, ಸಬ್ ಕಾ ವಿಕಾಸ್
ದಾಖಲೆಯ ಸತತ 9ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬಜೆಟ್ ಮೇಲೆ ನಿರೀಕ್ಷೆ ಇಲ್ಲ. ಆದರೂ ಕಾದು ನೋಡೋಣ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯೆ
ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿ ಮಾಡಿದ ನಿರ್ಮಲಾ
ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಗೃಹ ಸಚಿವ ಅಮಿತ್ ಶಾ ಆಗಮನ
ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ತಿನಿಸಿದ ರಾಷ್ಟ್ರಪತಿ ದ್ರೌಪತಿ ಮುರ್ಮು
ಚುನಾವಣಾ ಹೊಸ್ತಿಲಲ್ಲಿರುವ ಕೇರಳಕ್ಕೆ ಬಜೆಟ್‌ನಲ್ಲಿ ಆದೇನು ನೀಡುತ್ತಾರೆ ಎನ್ನುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ: ಸಂಸದ ಶಶಿ ತರೂರ್
ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಭಾಗವಹಿಸಲು ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಶ್ರೀ ಗುರು ರವಿದಾಸ್ ವಿಶ್ರಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನವೀನ್
ನಿರೀಕ್ಷೆಗಳನ್ನು ಕಳೆದುಕೊಂಡಿರುವ ಸರ್ಕಾರದಿಂದ ಏನು ನಿರೀಕ್ಷೆ ಮಾಡಲಿ?: ಅಖಿಲೇಶ್ ಯಾದವ್
ನಿರೀಕ್ಷೆಗಳನ್ನೇ ಕಳೆದುಕೊಂಡಿರುವ ಕೇಂದ್ರ ಸರ್ಕಾರದಿಂದ ಈ ಬಜೆಟ್‌ನಲ್ಲಿ ಏನನ್ನು ನಿರೀಕ್ಷೆ ಮಾಡಲಿ ಎಂದು ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
ಐತಿಹಾಸಿಕ ಬಜೆಟ್ ಆಗಲಿದೆ: ಕಿರಣ್ ರಿಜಿಜು
ಇದೊಂದು ಐತಿಹಾಸಿಕ ಬಜೆಟ್ ಆಗಲಿದ್ದು, ಪ್ರಧಾನಿ ಅವರ 'ಸುಧಾರಣಾ ಎಕ್ಸ್‌ಪ್ರೆಸ್' ವಿಕಸಿತ ಭಾರತದ ಕಡೆಗೆ ವೇಗವಾಗಿ ಸಂಚರಿಸುತ್ತದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2026ರ ಜನವರಿ ತಿಂಗಳಲ್ಲಿ ₹1.93 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇದು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ 6.2ರಷ್ಟು ಹೆಚ್ಚಳ ಕಂಡುಬಂದಿದೆ.
ಷೇರುಪೇಟೆಯಲ್ಲಿ ವಿಶೇಷ ವಹಿವಾಟು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಇಂದು ಷೇರುಪೇಟೆಯಲ್ಲಿ ವಿಶೇಷ ವಹಿವಾಟು ಆರಂಭವಾಗಿದೆ. ಷೇರು ವಹಿವಾಟಿನಲ್ಲಿ ಏರಿಳಿತ ಕಂಡುಬಂದಿದೆ. ಬಿಎಸ್‌ಇ 13 ಅಂಶ ಏರಿಕೆ ಕಂಡರೆ ನಿಫ್ಟಿ7.90 ಅಂಶ ಇಳಿಕೆ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ 82,282.82 ಹಾಗೂ ನಿಫ್ಟಿ 25,312.75 ಅಂಶಕ್ಕೆ ತಲುಪಿದೆ.
ಸಾಮಾನ್ಯವಾಗಿ ಭಾನುವಾರದಂದು ಷೇರುಪೇಟೆ ವಹಿವಾಟು ನಡೆಯುವುದಿಲ್ಲ. ಆದರೆ, ಈ ಬಾರಿ ಫೆಬ್ರುವರಿ 1ರಂದು ಬಜೆಟ್ ಮಂಡನೆ ಇರುವುದರಿಂದ ವಿಶೇಷ ವಹಿವಾಟು ನಡೆಯುತ್ತಿದೆ. ಬೆಳಿಗ್ಗೆ 9.15ರಿಂದ ಮಧ್ಯಾಹ್ನ 3.30ರ ವರೆಗೆ ಷೇರುಪೇಟೆ ಕಾರ್ಯನಿರ್ವಹಿಸಲಿದೆ
ಬಜೆಟ್ ಮಂಡನೆಗೂ ಮುನ್ನ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಇಳಿಕೆ ಕಂಡುಬಂದಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ನಿರ್ಮಲಾ
ಬಜೆಟ್ ನಿರೀಕ್ಷೆ: ಕೈಗೆಟುಕಲಿದೆಯೇ ಆರೋಗ್ಯ ಮತ್ತು ಶಿಕ್ಷಣ?
ದಿನದಿಂದ ದಿನಕ್ಕೆ ಹೊರೆಯಾಗುತ್ತಿರುವ ವೈದ್ಯಕೀಯ ವೆಚ್ಚಗಳಿಂದಾಗಿ ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿವೆ. ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಕಡಿಮೆ ದರದ ಔಷಧಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂಬುದು ಪ್ರಮುಖ ನಿರೀಕ್ಷೆಯಾಗಿದೆ.
ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆ-ಕಾಲೇಜುಗಳ ಸುಧಾರಣೆ, ಡಿಜಿಟಲ್ ಕಲಿಕೆ ಮೂಲಸೌಕರ್ಯ ಮತ್ತು ಉನ್ನತ ಶಿಕ್ಷಣಕ್ಕೆ ಲಭಿಸುವ ಸಾಲಗಳು ಇನ್ನಷ್ಟು ಸರಳ ಹಾಗೂ ಅಗ್ಗವಾಗುವತ್ತ ಪೋಷಕರ ಕಣ್ಣು ನೆಟ್ಟಿದೆ
ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ ಪ್ರದರ್ಶನ...
ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ ಪ್ರದರ್ಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಜೆಟ್ ತಂಡದ ಸದಸ್ಯರು.
ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು ಒಡಿಶಾ ರಾಜ್ಯದ ಯುವತಿ ಬಜೆಟ್ ನಿರೀಕ್ಷೆ ಬಗ್ಗೆ ಮಾತನಾಡಿದರು..
ಉದ್ಯೋಗ ಮತ್ತು ಆದಾಯ ಭದ್ರತೆ ನಿರೀಕ್ಷೆ
ಉದ್ಯೋಗ ಮತ್ತು ಆದಾಯ ಭದ್ರತೆ ಯುವಜನರಲ್ಲಿ ನಿರುದ್ಯೋಗ ಮತ್ತು ಸಿಕ್ಕ ಕೆಲಸವೂ ಅಲ್ಪಾವಧಿಯಾಗುವ ಗಂಭೀರ ಸಮಸ್ಯೆ ಈಗಲೂ ಎದುರಿಸುತ್ತಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಯೇ ಈ ಬಜೆಟ್‌ನ ಪ್ರಮುಖ ನಿರೀಕ್ಷೆಯಾಗಿದೆ. ಮೂಲಸೌಕರ್ಯ, ಉತ್ಪಾದನಾ ಕ್ಷೇತ್ರ ಮತ್ತು ಎಂಎಸ್‌ಎಂಇಗಳ ಹೂಡಿಕೆ ಹೆಚ್ಚಳದಿಂದ ಉದ್ಯೋಗಾವಕಾಶ ಹೆಚ್ಚಿಸಬೇಕು. ಸಣ್ಣ ಉದ್ಯಮಗಳಿಗೆ ಸುಲಭ ಸಾಲ, ಸರಳ ನಿಯಮಾವಳಿ ಮತ್ತು ಸರ್ಕಾರದ ನಿರಂತರ ಬೆಂಬಲವನ್ನೂ ಕೈಗಾರಿಕಾ ಕ್ಷೇತ್ರದ ಪ್ರಮುಖರು ಎದುರು ನೋಡುತ್ತಿದ್ದಾರೆ.
ಕರ್ತವ್ಯ ಭವನಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯ ಸಂಸತ್ ಭವನದ ಆವರಣದಲ್ಲಿರುವ ಕರ್ತವ್ಯ ಭವನಕ್ಕೆ ಆಗಮಿಸಿದರು
ವೇತನದಾರರು, ಪಿಂಚಣಿದಾರರ ತೆರಿಗೆ ರಿಯಾಯಿತಿ ನಿರೀಕ್ಷೆ
ವೇತನದಾರರು ತೆರಿಗೆ ವಿನಾಯಿತಿ ಮಿತಿಯು ತಗ್ಗುವ ನಿರೀಕ್ಷೆಯಲ್ಲಿದ್ದಾರೆ. ಇದರೊಂದಿಗೆ ಹೆಚ್ಚಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಸರಳೀಕೃತ ತೆರಿಗೆ ಸ್ಲಾಬ್‌ಗಳ ನಿರೀಕ್ಷೆಯೂ ಅವರದ್ದಾಗಿದೆ. ಪಿಂಚಣಿದಾರರು ತಮ್ಮ ಆದಾಯಕ್ಕೆ ನ್ಯಾಯಸಮ್ಮತ ತೆರಿಗೆ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ.
ತೆರಿಗೆ, ಬೆಲೆ ಏರಿಕೆ ತಗ್ಗುವ ನಿರೀಕ್ಷೆಯಲ್ಲಿ ಮಧ್ಯಮ ವರ್ಗ
ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗ, ನೌಕರ ವರ್ಗ ಮತ್ತು ಪಿಂಚಣಿದಾರರು ಬಜೆಟ್ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ, ತೆರಿಗೆ ರಿಯಾಯಿತಿ ಘೋಷಿಸುವ, ಉದ್ಯೋಗ ಸೃಷ್ಟಿಸುವ, ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಳಿಗೆ ನೆರವಾಗುವ ಬಜೆಟ್ ಆಗಬಹುದೇ ಎಂಬ ಚರ್ಚೆ ಸಾಮಾನ್ಯವಾಗಿದೆ. ಹೀಗಾಗಿ ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ತಗ್ಗಿಸುವ ಬಜೆಟ್‌ನ ನಿರೀಕ್ಷೆಯಲ್ಲಿದ್ದಾರೆ.