
ಮೋಹನ್ ಲಾಲ್ ಹಾಗೂ ಮೀನಾ ನಟನೆಯ 'ದೃಶ್ಯಂ' ಚಿತ್ರದ ಸ್ವೀಕೆಲ್‌ಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಇದೀಗ ಮುಂಬರುವ 'ದೃಶ್ಯಂ– 3' ಚಿತ್ರದ ಸಣ್ಣ ಝಲಕ್ ಒಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿದೆ.
'ದೃಶ್ಯಂ– 3' ಚಿತ್ರ ಏಪ್ರಿಲ್ 2 ರಂದು ತೆರೆಕಾಣುತ್ತಿದೆ.
ಈ ಕುರಿತು ವಿಡಿಯೊ ಹಂಚಿಕೊಂಡಿರುವ ಮೋಹನ್ ಲಾಲ್, ‘ವರ್ಷಗಳು ಉರುಳಿದರೂ ಹಿಂದಿನ ಅನೇಕ ಸಂಗತಿಗಳು ಹಾಗೆ ಉಳಿದುಕೊಂಡಿವೆ’ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೊದಲ್ಲಿ ನಿಗೂಢ ಸ್ಥಳ ಹಾಗೂ ನಿರಂತರವಾಗಿ ಫೋನ್ ರಿಂಗಿಣಿಸುವ ದೃಶ್ಯವನ್ನು ಕಾಣಬಹುದು.
ಪನೋರಮಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಜೀತು ಜೋಸೆಫ್ ಅವರು ನಿರ್ದೇಶನ ಮಾಡಿದ್ದಾರೆ.
'ದೃಶ್ಯಂ– 3' ಚಿತ್ರದಲ್ಲೂ ಜಾರ್ಜ್ ಕುಟ್ಟಿಯ ಕಥೆ ಮುಂದುವರಿಯಲಿದೆ. ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿಲ್ ಜಾನ್ಸನ್ ಸಂಗೀತ, ಸತೀಶ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
2013ರಲ್ಲಿ ತೆರೆಕಂಡ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ 'ದೃಶ್ಯಂ' ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ರವಿಚಂದ್ರನ್, ಹಿಂದಿಯಲ್ಲಿ ಅಜಯ್ ದೇವಗನ್, ತೆಲುಗಿನಲ್ಲಿ ದಗ್ಗುಬಾಟಿ ವೆಂಕಟೇಶ್ ಅವರು ನಟಿಸಿದ್ದರು.
2021ರಲ್ಲಿ ಬಿಡುಗಡೆಗೊಂಡ 'ದೃಶ್ಯಂ-2' ಕೂಡ ಯಶಸ್ಸು ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.