PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ
ಪ್ರಜಾವಾಣಿ ವೆಬ್ ಡೆಸ್ಕ್
Published 28 ಜೂನ್ 2025, 13:12 IST
Last Updated 28 ಜೂನ್ 2025, 13:12 IST
ನಿರ್ದೇಶಕ ಶ್ರೀನಿವಾಸ ರಾಜು, ನಟ ದುನಿಯಾ ವಿಜಯ್, ನಟಿ ಅಂಕಿತಾ ಅಮರ್
ಪ್ರಜಾವಾಣಿ ಚಿತ್ರ
ಬೆಂಗಳೂರು: ಚಂದನವನದ ಚಂದದ ಘಮಲನ್ನು ಪಸರಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಗೆ ಭರ್ಜರಿ ಚಾಲನೆ ದೊರಕಿದೆ. ‘ಪ್ರಜಾವಾಣಿ’ಯು ತನ್ನ 75ನೇ ವರ್ಷದ ಸಂದರ್ಭದಲ್ಲಿ ಪ್ರಾರಂಭಿಸಿದ್ದ ಈ ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿ ಇದೀಗ ಚಂದನವನದಲ್ಲಿ ಗುರುತಿಸಿಕೊಂಡಿದೆ.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ-3
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ
ADVERTISEMENT
ಸಿಎಂ, ಡಿಸಿಎಂ ಸೇರಿ ಗಣ್ಯರು ಬಾಗಿ...
ಈ ವರ್ಣರಂಜಿತ, ಅರ್ಥಗರ್ಭಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಶಿವರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ತಾರೆಯರು–ತಂತ್ರಜ್ಞರು, ರಾಜಕೀಯ, ಸಾಹಿತ್ಯ ವಲಯದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
2024ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ100ಕ್ಕೂ ಹೆಚ್ಚು ಮಂದಿ ನಾಮನಿರ್ದೇಶನ
2024ರಲ್ಲಿ ತೆರೆಕಂಡ ಸಿನಿಮಾಗಳನ್ನು ಮೂರನೇ ಆವೃತ್ತಿಗೆ ಪರಿಗಣಿಸಲಾಗಿದ್ದು, ಒಟ್ಟು 25 ವಿಭಾಗಗಳಲ್ಲಿ 115ಕ್ಕೂ ಅಧಿಕ ಜನರು ನಾಮನಿರ್ದೇಶನಗೊಂಡಿದ್ದರು. ಈ ಪೈಕಿ ಪ್ರಶಸ್ತಿ ಯಾರ ಮುಡಿಗೆ ಎನ್ನುವ ಕುತೂಹಲಕ್ಕೆ ಇಂದು ತೆರೆಬೀಳಲಿದೆ.
'ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ' ಸಮಗ್ರ ಮಾಹಿತಿಗಾಗಿ ವೆಬ್‌ಸೈಟ್ ನೋಡಿ
‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ‘ಪ್ರಜಾವಾಣಿ’ ಪ್ರಾರಂಭಿಸಿದ್ದ ‘ಸಿನಿ ಸಮ್ಮಾನ’
‘ಪ್ರಜಾವಾಣಿ’ ದಿನಪತ್ರಿಕೆ ಹಾಗೂ ಕನ್ನಡ ಚಿತ್ರರಂಗದ ಒಡನಾಟಕ್ಕೆ ಹಲವು ದಶಕಗಳ ಇತಿಹಾಸವಿದೆ. ಚಿತ್ರರಂಗದ ಏಳುಬೀಳುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅದರ ನಾಡಿಮಿಡಿತ ಕೇಳಿಸಿಕೊಳ್ಳುತ್ತಾ, ಅದರೊಳಗಿನ ಸರಿ–ತಪ್ಪುಗಳನ್ನು ಹೊಣೆಗಾರಿಕೆಯಿಂದ ಓದುಗರಿಗೆ ದಾಟಿಸುತ್ತಾ, ಸಿನಿಮಾಗಳನ್ನು ಸಾಂಸ್ಕೃತಿಕ ದೃಷ್ಟಿಯಿಂದಲೂ ನೋಡುವ ಗಾಂಭೀರ್ಯವನ್ನು ‘ಪ್ರಜಾವಾಣಿ’ ಇಂದಿಗೂ ಉಳಿಸಿಕೊಂಡು ಬಂದಿದೆ.
ಸದ್ಯ 78 ವರ್ಷಗಳನ್ನು ಪೂರೈಸುತ್ತಿರುವ ‘ಪ್ರಜಾವಾಣಿ’ಯು 2023ರಲ್ಲಿ ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮ ಆರಂಭಿಸಿತ್ತು. ಈ ಕಾರ್ಯಕ್ರಮದ ಮೂರನೇ ಆವೃತ್ತಿಯ ಸಮಯ ಇದಾಗಿದೆ.
ಹೊಸಬರು–ಅನುಭವಿಗಳ ಸಮ್ಮಿಲನ
‘ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ತೀರ್ಪುಗಾರರ ಮಂಡಳಿಯಲ್ಲಿ ಕೆಲವು ಹೊಸ ಮುಖಗಳು ಈ ವರ್ಷ ಸೇರ್ಪಡೆಗೊಂಡಿದ್ದವು. ತಮ್ಮದೇ ರಂಗದ ಗೆಳೆಯರ ಬಳಿ ಹರಟುತ್ತಾ, ಸಿನಿ ಸಮ್ಮಾನದ ಪ್ರಕ್ರಿಯೆಗಳ ಬಗ್ಗೆ ಚರ್ಚಿಸುತ್ತಾ ಮೊದಲ ಮತ್ತು ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೆನಪುಗಳನ್ನು ಅವರೆಲ್ಲರೂ ಮೆಲುಕು ಹಾಕಿದ್ದರು. ತೀರ್ಪುಗಾರರ ಸಮ್ಮಿಲನಕ್ಕೂ ಮುನ್ನ ‘ಕನ್ನಡ ಚಿತ್ರರಂಗದ ಸದ್ಯದ ಸ್ಥಿತಿಗತಿ’ ಕುರಿತ ದುಂಡು ಮೇಜಿನ ಸಭೆ ನಡೆಯಿತು. ಈ ಸಭೆಯಲ್ಲಿ ಚರ್ಚೆಗೊಂಡ ಅಂಶಗಳ ಬಗ್ಗೆಯೂ ತೀರ್ಪುಗಾರರು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಮೊದಲೆರಡು ಆವೃತ್ತಿಗಳ ವಿಡಿಯೊ ತುಣುಕುಗಳು ಇಡೀ ಸಭೆಗೆ ಚೈತನ್ಯ ತುಂಬಿತ್ತು.
ಮೂರನೇ ಆವೃತ್ತಿಯ ಮುಖ್ಯ ತೀರ್ಪುಗಾರರ ಮಂಡಳಿ ಮುಖ್ಯಸ್ಥರಾದ ನಿರ್ದೇಶಕ ಟಿ.ಎಸ್.ನಾಗಾಭರಣ, ಮುಖ್ಯ ತೀರ್ಪುಗಾರರಾದ ನಿರ್ದೇಶಕ ಪಿ.ಶೇಷಾದ್ರಿ, ನಿರ್ದೇಶಕಿ ಡಿ. ಸುಮನ್ ಕಿತ್ತೂರು, ನಟ ಕಿಶೋರ್, ನಟಿ ಪೂಜಾ ಗಾಂಧಿ ಹಾಗೂ ತಾಂತ್ರಿಕ ತೀರ್ಪುಗಾರರ ಮಂಡಳಿಯಲ್ಲಿರುವ ಕಲಾ ನಿರ್ದೇಶಕ ಶಶಿಧರ ಅಡಪ, ಸಿನಿಮಾ ವಿಮರ್ಶಕರಾದ ಗಂಗಾಧರ್ ಮೊದಲಿಯಾರ್ ಹಾಗೂ ಬಾ.ನಾ.ಸುಬ್ರಹ್ಮಣ್ಯ, ಸಂಕಲನಕಾರರಾದ ಎಂ.ಎನ್.ಸ್ವಾಮಿ ಹಾಗೂ ಕೆಂಪರಾಜು, ನೃತ್ಯ ನಿರ್ದೇಶಕಿ ಹರಿಣಿ, ಚಿತ್ರಸಾಹಿತಿ–ನಿರ್ದೇಶಕ ನಾಗೇಂದ್ರ ಪ್ರಸಾದ್, ಛಾಯಾಚಿತ್ರಗ್ರಾಹಕ ಸತ್ಯ ಹೆಗಡೆ, ಸಾಹಿತಿ–ಸಿನಿಮಾ ವಿಮರ್ಶಕಿ ಪ್ರತಿಭಾ ನಂದಕುಮಾರ್, ಧ್ವನಿ ಗ್ರಹಣ ಪರಿಣಿತ ಜಾನ್ಸನ್, ನಿರ್ದೇಶಕರಾದ ಜಯತೀರ್ಥ ಹಾಗೂ ಬಿ.ಎಂ.ಗಿರಿರಾಜ್, ನಟರಾದ ಶಿವಧ್ವಜ್ ಹಾಗೂ ಪಿ.ಡಿ.ಸತೀಶ್‌ಚಂದ್ರ, ಸಾಹಿತಿ–ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ, ಸಿನಿಮಾ ವಿಮರ್ಶಕಿ ಪ್ರೀತಿ ನಾಗರಾಜ್, ಸಿನಿಮಾ ವಿಮರ್ಶಕ ಹರೀಶ್ ಮಲ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಯಾರ ಮುಡಿಗೆ ಸಿನಿ ಸಮ್ಮಾನ
ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿರುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿ ಇಂದು ಸಂಜೆ ಅದ್ದೂರಿಯಾಗಿ ನಡೆಯಲಿದೆ.
ತನ್ನ ‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ‘ಪ್ರಜಾವಾಣಿ’ ಪ್ರಾರಂಭಿಸಿದ್ದ ಈ ‘ಸಿನಿ ಸಮ್ಮಾನ’ವೆಂಬ ವರ್ಣರಂಜಿತ, ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಈ ಬಾರಿ ಚಂದನವನದ ಪ್ರಸಿದ್ಧ ನಟ–ನಟಿಯರು, ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. 2024ರಲ್ಲಿ ತೆರೆಕಂಡ ಸಿನಿಮಾಗಳನ್ನು ಈ ಬಾರಿಯ ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಒಟ್ಟು 25 ವಿಭಾಗಗಳಲ್ಲಿ ಪ್ರಶಸ್ತಿಗೆ ನೂರಕ್ಕೂ ಅಧಿಕ ಜನರು ನಾಮನಿರ್ದೇಶನಗೊಂಡಿದ್ದಾರೆ. ಈ ಪೈಕಿ ಯಾರ ಮುಡಿಗೆ ಈ ಚೆಂದದ ಸಮ್ಮಾನ ಎನ್ನುವುದು ಕೆಲವೇ ಹೊತ್ತಿನಲ್ಲಿ ಘೋಷಣೆಯಾಗಲಿದೆ.
ಪ್ರಶಸ್ತಿಯ ವಿಭಾಗಗಳು: ಒಟ್ಟು 25
ಅತ್ಯುತ್ತಮ ನಟ
ಅತ್ಯುತ್ತಮ ನಟಿ
ವರ್ಷದ ಅತ್ಯುತ್ತಮ ಚಿತ್ರ
ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಪೋಷಕ ನಟಿ
ಅತ್ಯುತ್ತಮ ನಿರ್ದೇಶನ
ಅತ್ಯುತ್ತಮ ಚೊಚ್ಚಲ ನಿರ್ದೇಶನ
ಅತ್ಯುತ್ತಮ ಸಂಗೀತ ನಿರ್ದೇಶನ
ಅತ್ಯುತ್ತಮ ಛಾಯಾಚಿತ್ರಗ್ರಹಣ
ಅತ್ಯುತ್ತಮ ಸಂಕಲನ
ಅತ್ಯುತ್ತಮ ಚಿತ್ರಕಥೆ
ಅತ್ಯುತ್ತಮ ಹಿನ್ನೆಲೆ ಗಾಯಕ
ಅತ್ಯುತ್ತಮ ಹಿನ್ನೆಲೆ ಗಾಯಕಿ
ಅತ್ಯುತ್ತಮ ಗೀತ ಸಾಹಿತ್ಯ
ಅತ್ಯುತ್ತಮ ನೃತ್ಯ ನಿರ್ದೇಶನ
ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು
ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ
ಅತ್ಯುತ್ತಮ ನಿರ್ಮಾಣ ವಿನ್ಯಾಸ
ಅತ್ಯುತ್ತಮ ವಿಎಫ್‌ಎಕ್ಸ್, ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್
ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ
ಜನಮೆಚ್ಚಿದ ವಿಭಾಗದ ಪ್ರಶಸ್ತಿ
ಜನಮೆಚ್ಚಿದ ಸಿನಿಮಾ
ಜನಮೆಚ್ಚಿದ ನಟ
ಜನಮೆಚ್ಚಿದ ನಟಿ
ಜನಮೆಚ್ಚಿದ ಸಂಗೀತ
ಸಂಪಾದಕರ ಆಯ್ಕೆ
ವರ್ಷದ ಗಮನಾರ್ಹ ಸಾಧನೆ
ಕನ್ನಡ ಸಿನಿಮಾಗೆ ಶ್ರೇಷ್ಠ ಕೊಡುಗೆ
ವರ್ಷದ ಅತ್ಯುತ್ತಮ ಚಿತ್ರ, ವರ್ಷದ ಅತ್ಯುತ್ತಮ ನಟ, ವರ್ಷದ ಅತ್ಯುತ್ತಮ ನಟಿ ನಾಮನಿರ್ದೇಶನಗೊಂಡವರ ಪಟ್ಟಿ
ಸಿನಿ ಸಮ್ಮಾನ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕರಾದ ಎಸ್.ಆರ್ ಭಾರ್ಗವ, ಪಿ. ಶೇಷಾದ್ರಿ, ಎನ್.ಆರ್.ಕೆ.ವಿಶ್ವನಾಥ್, ಲಹರಿ ಫಿಲ್ಸಂನ ನಿರ್ಮಾಪಕ ನವೀನ್, ಬಿ.ಎನ್.ಸುಬ್ರಹ್ಮಣ್ಯ ಇತರರ ಆಗಮನ
ಸಿನಿ ಸಮ್ಮಾನ ಸಮಾರಂಭಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಆಗಮನ
ಪ್ರಜಾವಾಣಿ ಸಿನಿ ಸಮ್ಮಾನ 3ನೇ ಆವೃತ್ತಿಗೆ ಅದ್ದೂರಿ ಚಾಲನೆ ದೊರಕಿದೆ.
ಸಿನಿ ಸಮ್ಮಾನ ಕಾರ್ಯಕ್ರಮಕ್ಕೆ ಲಹರಿ ಫಿಲ್ಮ್ಸ್ ನಿರ್ಮಾಪಕ ನವೀನ ಆಗಮನ
ನಿರ್ದೇಶಕ ಅರವಿಂದ್ ಆಗಮನ
ಕೆ.ಜಿ.ಎಫ್ ಖ್ಯಾತಿಯ ಕಲಾ ನಿರ್ದೇಶಕ ಎಸ್. ಶಿವಕುಮಾರ್ ಆಗಮನ
ಗೀತಂ ವಿಶ್ವವಿದ್ಯಾಲಯದ ನಿರ್ದೇಶಕಿ ಕಿರಣ್ ಕೆರ್ಕೆಟ್ಟ
ಕೆರೆಬೇಟೆ ಚಿತ್ರದ ನಿರ್ದೇಶಕ ಜ್ಞಾನೇಶ್ ಹಾಗೂ ನಾಯಕ ಗೌರಿಶಂಕರ್
ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ನಟಿ, ನಿರ್ಮಾಪಕಿ ಗೀತಪ್ರಿಯಾ
ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿದ್ದು ಪೂರ್ಣಚಂದ್ರ
ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯ ಪ್ರಾದೇಶಿಕ ಮ್ಯಾನೇಜರ್ ವಿನಯ್ ಕುಮಾರ್ ಬಿ.ಕೆ
ಉಪೇಂದ್ರ ನಿರ್ದೇಶನದ UI ಚಿತ್ರಕ್ಕೆ ಅತ್ಯುತ್ತಮ ವಿಐ ಎಫೆಕ್ಟ್ಸ್ ಪ್ರಶಸ್ತಿ
ಅತ್ಯುತ್ತಮ ವಿಎಫ್‌ಎಕ್ಸ್, ಎಸ್‌ಎಫ್‌ಎಕ್ಸ್, ಪೋಸ್ಟ್ ಪ್ರೊಡಕ್ಷನ್, ಆ್ಯನಿಮೇಷನ್ ಚಿತ್ರ: ಯುಐ
ಪ್ರಶಸ್ತಿಗಳನ್ನು ನೀಡುವಾಗ ಬಹುತೇಕರು VFXಗೆ ಮಾನ್ಯತೆ ನೀಡುವುದಿಲ್ಲ, ಪ್ರಜಾವಾಣಿ VFX ಗುರುತಿಸಿರುವುದು ಸಂತೋಷ ತಂದಿದೆ
ನವೀನ್
ಸಿನಿ ಸಮ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಖ್ಯಾತ ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್
ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ರಿಷಾ
ಕಾರ್ಯಕ್ರಮಕ್ಕೆ ಆಗಮಿಸಿದ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯ ಹಿರಿಯ ವ್ಯವಸ್ಥಾಪಕ ಪಿ. ಶ್ರೀನಿವಾಸಮೂರ್ತಿ
ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಮ್ಯಾಕ್ಸ್ ಚಿತ್ರಕ್ಕೆ
ಜೆ. ಶಿವಕುಮಾರ್ ಪ್ರಶಸ್ತಿ ಸ್ವೀಕಾರ, ಮ್ಯಾಕ್ಸ್ ಚಿತ್ರದ ಕಲಾ ನಿರ್ದೇಶಕ
ಮ್ಯಾಕ್ಸ್ ಚಿತ್ರದಲ್ಲಿ ನಿರ್ಮಾಣ ವಿನ್ಯಾಸ ಇದೆ, ಆದರೆ ಅದನ್ನು ಬಹುತೇಕರು ಗುರುತಿಸಿರಲಿಲ್ಲ, ಪ್ರಜಾವಾಣಿ ಅದನ್ನು ಗುರುತಿಸಿರುವುದು ಸಂತೋಷ ತಂದಿದೆ
ಜೆ, ಶಿವಕುಮಾರ್
ಫ್ರೀಡಂ ಹೆಲ್ತ್ ಒಯಿಲ್‌ನ ಸಹಾಯಕ ಹಿರಿಯ ವ್ಯವಸ್ಥಾಪಕ (ಕರ್ನಾಟಕ): ಅಭಿನವ ಪಾಂಡೆ ಹಾಗೂ ಶಾಖಾ ವ್ಯವಸ್ಥಾಪಕ ಹರ್ಷ್ ರಸ್ತೊಗಿ ಕಾರ್ಯಕ್ರಮಕ್ಕೆ ಆಗಮನ
ಕಾರ್ಯಕ್ರಮದಲ್ಲಿ ರಾಮ ರಾಮ ರೇ ಚಿತ್ರದ ನಟ, ನಟರಾಜ
ಕಾರ್ಯಕ್ರಮದಲ್ಲಿ ನಟಿ ಮಮತಾ ರಾಹುತ್
ನೃತ್ಯದ ಝಲಕ್
ಬ್ಲಿಂಕ್ ಮೂಲಕ ಚೊಚ್ಚಲ ನಿರ್ದೇಶನದಲ್ಲೇ ಪ್ರಶಸ್ತಿ ಪಡೆದ ಶ್ರೀನಿಧಿ
ಶ್ರೀನಿಧಿ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಸಹಪ್ರಾಯೋಜಕರಾದ ದಿ ಜನತಾ ಕೋ ಆಪರೇಟಿವ್ ಬ್ಯಾಂಕ್‌ನ ಅಶ್ವತ್ಥ ಮಾತನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ Insights.iasನ ಸಂಸ್ಥಾಪಕ ಹಾಗೂ ನಿರ್ದೇಶಕ ವಿನಯ್ ಕುಮಾರ್ ಜಿ.ಬಿ
ಕಾರ್ಯಕ್ರಮಕ್ಕೆ ಆಗಮಿಸಿದ ಗಾಯಕಿ ಶೃತಿ ಪ್ರಹ್ಲಾದ್
ಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್‌ಆರ್‌ಕೆ ವಿಶ್ವನಾಥ ಅವರ ಮಾತು.
ಕಾರ್ಯಕ್ರಮದಲ್ಲಿ ಕುಬುಸ ಚಿತ್ರದ ನಟಿ ಮಹಾಲಕ್ಷ್ಮೀ
ಪೃಥ್ವಿ ಕೊಣನೂರು ಅವರಿಂದ ಪ್ರಶಸ್ತಿ ಸ್ವೀಕಾರ
ನನಗೆ ಎರಡನೇ ಭಾರಿ ಪ್ರಶಸ್ತಿ ಪ್ರಜಾವಾಣಿ ಸಿನಿ ಸಮ್ಮಾನದಲ್ಲಿ ಸಿಕ್ಕಿದೆ. ನನಗೆ ಕಥೆ ಹೇಳುವುದಷ್ಟೇ ಮುಖ್ಯ, ಸಂದೇಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಚಿತ್ರ ಚೆನ್ನಾಗಿ ಮಾಡಿದಾಗ ಸಂದೇಶ ಹೋಗುತ್ತದೆ
ಪೃಥ್ವಿ ಕೊಣನೂರು
ಕಾರ್ಯಕ್ರಮದಲ್ಲಿ @houseofbsc ನಿರ್ದೇಶಕ ಮೃಣಾಲ್ ಬಂಕಾಪುರ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಗೆ ಅದ್ಧೂರಿ ಚಾಲನೆ. ಚಂದನವನದ ಸಡಗರದ ಕಾರ್ಯಕ್ರಮದ ಸಂಭ್ರಮದ ಕ್ಷಣಗಳು…
ಅತ್ಯುತ್ತಮ ಸಂಕಲನ: ಜ್ಞಾನೇಶ್ ಬಿ.ಮಠದ್, ಚಿತ್ರ: ಕೆರೆಬೇಟೆ
೭೭ ವರ್ಷ ಇತಿಹಾಸ ಇರುವ ಪ್ರಜಾವಾಣಿ ಗುರುತಿಸಿರುವುದು ನನಗೆ ಹೆಮ್ಮೆ ತಂದಿದೆ
ಜ್ಞಾನೇಶ್ ಬಿ.ಮಠದ್
ಅತ್ಯುತ್ತಮ ಧ್ವನಿಗ್ರಹಣ ಮತ್ತು ಶಬ್ದ ವಿನ್ಯಾಸ ಪ್ರಶಸ್ತಿ ಕೆರೆಬೇಟೆ ಚಿತ್ರಕ್ಕೆ
ಗೌರಿ ಶಂಕರ್ ಅವರಿಂದ ಸ್ವೀಕಾರ
ನಮ್ಮ ಶ್ರಮವನ್ನು ಗುರುತಿಸಿರುವ ಪ್ರಜಾವಾಣಿಗೆ ಧನ್ಯವಾದ: ಕೆರೆಬೇಟೆ ಎಲ್ಲ ಫ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ. ಶಬ್ಧ ವಿನ್ಯಾಸದಲ್ಲಿ ಸಾಕಷ್ಟು ಜನ ಕೆಲಸ ಮಾಡಿದ್ದಾರೆ
ನಟ, ನಿರ್ಮಾಪಕ ಗೌರಿ ಶಂಕರ್
ಕಾರ್ಯಕ್ರಮದಲ್ಲಿ ಫೋಟೋ ಸಿನಿಮಾದ ನಟ ಮಹದೇವ ಹಡಪದ ಹಾಗೂ ನಿರ್ದೇಶಕ ಉತ್ಸವ್ ಗಾಂವ್ಕರ್
ಅತ್ಯುತ್ತಮ ಛಾಯಾಚಿತ್ರಗ್ರಹಣ ಪ್ರಶಸ್ತಿ: ಮ್ಯಾಕ್ಸ್ ಚಿತ್ರದ ಶೇಖರ್ ಚಂದ್ರ ಅವರಿಗೆ
ಶೇಖರ್ ಚಂದ್ರ
ಮ್ಯಾಕ್ಸ್ ಚಿತ್ರವನ್ನು 120 ದಿನ ರಾತ್ರಿಯಲ್ಲೇ ಶೂಟಿಂಗ್ ಮಾಡಿದ್ದೇವೆ. ದೇಶದಾದ್ಯಂತ ನಮ್ಮ ಪರಿಶ್ರಮ ಗುರುತಿಸಿದ್ದಾರೆ. ಪ್ರಜಾವಾಣಿ ಸಿನಿ ಸಮ್ಮಾನ್ ಅವಾರ್ಡ್ ಬಂದಿರೋದು ಸಂತೋಷವನ್ನು ಇಮ್ಮಡಿಗೊಳಿಸಿದೆ.
ಶೇಖರ್ ಚಂದ್ರ, ಸಿನಿಮಾಟ್ರೋಗ್ರಾಫರ್
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿದರು.
ರೆಡ್ ಕಾರ್ಪೆಟ್‌ನಲ್ಲಿ ನಟಿ ಸುಮನಾ ನಗರ್ಕರ್ ಮಿಂಚು
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಅರವಿಂದ್ ಮಾತನಾಡಿದರು .
ಪ್ರಜಾವಾಣಿ ಸಿನಿ ಸಮ್ಮಾನ ಮೂರನೇ ಆವೃತ್ತಿಯ ಝಲಕ್
ಅತ್ಯುತ್ತಮ ನೃತ್ಯ ನಿರ್ದೇಶನ: ಶೇಖರ್ ಮಾಸ್ಟರ್, ಚಿತ್ರ: ಕೃಷ್ಣಂ ಪ್ರಣಯ ಸಖಿ, ಹಾಡು: ದ್ವಾಪರ
ಶೇಖರ್ ಮಾಸ್ಟರ್
ಪ್ರಜಾವಾಣಿ ನನ್ನ ನೃತ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅವಿಸ್ಮರಣೀಯ. ಜೇನ ಧನಿಯೋವಳೆ ಹಾಡು ದೇಶದಾದ್ಯಂತ ಜನಪ್ರಿಯ ಆಗಿದೆ. ನೂರು ಮಿಲಿಯನ್ ಅಧಿಕ ವ್ಯೂವ್ ಕಂಡಿದೆ. ಕೋಟ್ಯಂತರ ರೀಲ್ಸ್ ಬಂದಿರೋದು ನನಗೆ ಸಂತಸ ತರಿಸಿದೆ.
ಶೇಖರ್ ಮಾಸ್ಟರ್, ಪುಟ್ಟ ಬೊಮ್ಮಾ ಖ್ಯಾತಿಯ ಡ್ಯಾನ್ಸ್ ಮಾಸ್ಟರ್
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸುಬ್ರಮಣ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಿಟಿ ಕೊ–ಆಪರೇಟಿವ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಶೇಷಾದ್ರಿ
ಸಿನಿ ಸಮ್ಮಾನಕ್ಕೆ ಕಳೆ ತಂದ ಗಣ್ಯರ ಬಳಗ...
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಗೀತಂ ಯುನಿವರ್ಸಿಟಿಯ ಕಿರಣ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶನಕ್ಕಾಗಿ ಬ್ಲಿಂಕ್ ಚಿತ್ರದ ನಿರ್ದೇಶಕ ಶ್ರೀನಿಧಿ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯಲ್ಲಿ ಅತ್ಯುತ್ತಮ ಸಂಕಲನಕ್ಕಾಗಿ ಕೆರೆ ಬೇಟೆ ಚಿತ್ರದ ಸಂಕಲನಕಾರ ಜ್ಞಾನೇಶ ಬಿ. ಮಠದ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯಲ್ಲಿ ಅತ್ಯುತ್ತಮ ಛಾಯಾಚಿತ್ರಗ್ರಹಣಕ್ಕಾಗಿ ಮ್ಯಾಕ್ಸ್ ಚಿತ್ರದ ಛಾಯಾಚಿತ್ರಗ್ರಾಹಕ ಶೇಖರ್ ಚಂದ್ರ ಪ್ರಶಸ್ತಿ ಪಡೆದರು.
ಕಳೆದ ಸಾಲಿನಲ್ಲಿ ಅಗಲಿದ ಹಿರಿಯ ನಿರ್ಮಾಪಕ ದ್ವಾರಕೀಶ್, ಹಾಸ್ಯ ನಟರಾದ ಬ್ಯಾಂಕ್ ಜನಾರ್ದನ ಮತ್ತು ಸರಿಗಮ ವಿಜಿ ಅವರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು.
ಪ್ರಜಾವಾಣಿ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯಲ್ಲಿ 2025ನೇ ಸಾಲಿನ ಅತ್ಯುತ್ತಮ ನೃತ್ಯ ನಿರ್ದೇಶನ ವಿಭಾಗದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿನ ‘ದ್ವಾಪರ’ ಗೀತೆಯ ನೃತ್ಯ ನಿರ್ದೇಶನಕ್ಕೆ ಶೇಖರ್ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಭಾಗಿ
ಹಾಸ್ಯ ನಟ ಉಮೇಶ್ ಹಾಗೂ ಪತ್ನಿ
ರೆಡ್ ಕಾರ್ಪೆಟ್‌ನಲ್ಲಿ ಗಾಯಕ ಜಸ್ಕರಣ್ ಸಿಂಗ್
ಕಾರ್ಯಕ್ರಮದಲ್ಲಿ ಭಾಗಿಯಾದ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಪನ್ನಗ ನಾಗಾಭರಣ
ಜೀವಮಾನ ಸಾಧನೆಗಾಗಿ ನಟ ಶ್ರೀನಾಥ್ ಅವರಿಗೆ ಪ್ರಜಾವಾಣಿ ಸಿನಿ ಸಮ್ಮಾನ ಜೀವಮಾನ ಸಾಧನೆ ಪ್ರಶಸ್ತಿ: ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ
ಹಿರಿಯ ಕಲಾವಿದರಾದ ಶ್ರೀನಾಥ್‌ರವರ ಕಲಾಸೇವೆಗೆ 'ಜೀವಮಾನ ಸಾಧನೆ' ಪುರಸ್ಕಾರ ನೀಡಿ ಸಿಎಂ ಸಿದ್ದರಾಮಯ್ಯ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್ ಉಪಸ್ಥಿತರಿದ್ದರು.
ಜೀವಮಾನದ ಸಾಧನೆ: ಶ್ರೀನಾಥ್
ನಟನಿಗೆ ನಾಟಕವೇ ಮುಖ್ಯ: 'ಜೀವಮಾನ ಸಾಧನೆ' ಪ್ರಶಸ್ತಿ ಪಡೆದ ಶ್ರೀನಾಥ್ ಅಭಿಮತ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಟ ಶ್ರೀನಾಥ್, ವಿ. ರವಿಚಂದ್ರನ್ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ @sadguru_ayurveda ದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸ್ವಾತಿ ಪ್ರದೀಪ್ ಹಾಗೂ ಪ್ರದೀಪ್
ಪ್ರಶಸ್ತಿ ವಿಭಾಗ: ಅತ್ಯುತ್ತಮ ಹಿನ್ನೆಲೆ ಗಾಯಕಿ
ಪ್ರಶಸ್ತಿ ವಿಜೇತರು: ಶೃತಿ ಪ್ರಹ್ಲಾದ
ಗೀತೆ: ಹಿತ್ತಲಕ ಕರಿಬೇಡ ಮಾವ
ಚಿತ್ರ: ಕರಟಕ ದಮನಕ
ಕಾರ್ಯಕ್ರಮದಲ್ಲಿ @trawel_mart ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ. ಮೋಹನ್ ಕುಮಾರ್
ಕಾರ್ಯಕ್ರಮದಲ್ಲಿ @saigoldpalace ನ ಮಾಲೀಕ ಟಿ. ಶರವಣ
ಕಾರ್ಯಕ್ರಮದಲ್ಲಿ @neumen.menswear ಆಡಳಿತ ಪಾಲುದಾರರಾದ ನವೀನ್ ಹಾಗೂ ಕೇತನ್
ಹಿರಿಯ ನಟ ದತ್ತಣ್ಣ
ಅರ್ಜುನ್ ಜನ್ಯ
ತನ್ಯಾ ರಾಮ್
ಪ್ರಿಯಾ, ಭೀಮಾ ಸಿನಿಮಾ ನಟಿ
ಶಿವರಾಜ್‌ಕುಮಾರ್, ಗೀತಾ ಶಿವರಾಜ್ ಕುಮಾರ್
ದುನಿಯಾ ವಿಜಯ್
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಮೂರನೇ ಅವೃತ್ತಿಯ ರೆಡ್ ಕಾರ್ಪೆಟ್‌ನಲ್ಲಿ ನಟಿ ತನ್ಯಾ ರಾಮ್
ಹಿರಿಯ ಕಲಾವಿದರಾದ ಶ್ರೀನಾಥ್‌ರವರ ಕಲಾಸೇವೆಗೆ 'ಜೀವಮಾನ ಸಾಧನೆ' ಪುರಸ್ಕಾರ ನೀಡಿ ಸಿಎಂ ಸಿದ್ದರಾಮಯ್ಯ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಸಿನಿ ಸಮ್ಮಾನ ಸಮಾರಂಭದಲ್ಲಿ ನಟ ರವಿಚಂದ್ರನ್ ಅವರಿಗೆ 'ಕನ್ನಡ ಸಿನಿ ಧ್ರುವತಾರೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಾರಿವಳು ಯಾರಿವಳು ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್
ಪ್ರಜಾವಾಣಿ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಟ ಶಿವರಾಜ್‌ಕುಮಾರ್ ಮತ್ತು ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಟಿಯರಾದ ಖುಷಿ ರವಿ ಮತ್ತು ಚಂದನಾ ಅನಂತಕೃಷ್ಣ
ಕಾರ್ಯಕ್ರಮದಲ್ಲಿ ಗಾಯಕಿ ಅಂಕಿತಾ ಕುಂಡು
ಹಿರಿಯ ಕವಿ ಬಿ.ಆರ್. ಲಕ್ಷ್ಮಣ್ ರಾವ್ ಆಗಮನ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತಾಯವ್ವ ಚಿತ್ರದ ನಿರ್ಮಾಪಕಿ, ನಟಿ ಗೀತಪ್ರಿಯ ಮಾತನಾಡಿದರು.
ಕಾರ್ಯಕ್ರಮದಲ್ಲಿ @ttkprestige ನ ಸಹಾಯಕ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ ವಿಭಾಗ) ಜಸ್ಟಿನ್ ಆ್ಯಂಟನಿ
ಕಾರ್ಯಕ್ರಮದಲ್ಲಿ @akshayamotors ನ ಸಿಒಒ ವಿಕಾಸ್ ಎಂ.ಜೆ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಟ, ಪ್ರಣಯರಾಜ ಶ್ರೀನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಟ ರಂಗಾಯಣ ರಘು
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ‘ತಾರಿಣಿ’ ನಿರ್ದೇಶಕ ಸಿದ್ಧು ಪೂರ್ಣಚಂದ್ರ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 3ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನ್ಯಾಷನಲ್ ಇನ್ಷುರೆನ್ಸ್‌ನ ಬಿ.ಕೆ. ವಿಜಯಕುಮಾರ್ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಗಾಯಕ ಜಸ್ಕರಣ್ ಸಿಂಗ್ ಮಾತನಾಡಿದರು.
ನಟಿ ಅಂಕಿತಾ ಅಮರ್ ಮತ್ತು ಸಹೋದರಿ ಅನನ್ಯಾ ಅಮರ್
ಪ್ರಶಸ್ತಿ ವಿಭಾಗ: ಕನ್ನಡ ಸಿನಿ ಧ್ರುವತಾರೆ, ಪ್ರಶಸ್ತಿ ವಿಜೇತರು: ವಿ. ರವಿಚಂದ್ರನ್
ವರ್ಷದ ಅತ್ಯುತ್ತಮ ಸಾಧನೆ: ಧ್ರುವ ಸರ್ಜಾ
ಧ್ರುವ ಸರ್ಜಾ
ಕಾರ್ಯಕ್ರಮದಲ್ಲಿ @casagrandhomes ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಲಿಪಿ ಜಾಬ್ಸನ್
ಪ್ರಶಸ್ತಿ ವಿಭಾಗ: ಅತ್ಯುತ್ತಮ ಅತ್ಯುತ್ತಮ ಸಾಧನೆ
ಜನಮೆಚ್ಚಿದ ನಟ ಪ್ರಶಸ್ತಿ: ರಂಗಾಯಣ ರಘು, ಚಿತ್ರ: ಶಾಖಾಹಾರಿ
ರಂಗಾಯಣ ರಘು
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ಮಾತನಾಡಿದರು.
ಪ್ರಶಸ್ತಿ ವಿಭಾಗ: ಅತ್ಯುತ್ತಮ ಗೀತ ಸಾಹಿತ್ಯ | ಪ್ರಶಸ್ತಿ ವಿಜೇತರು: ವಿ.ನಾಗೇಂದ್ರ ಪ್ರಸಾದ್ | ಚಿತ್ರ: ಕೃಷ್ಣಂ ಪ್ರಣಯಂ ಸಖಿ | ಗೀತೆ: ದ್ವಾಪರ
ಪ್ರಶಸ್ತಿ ವಿಭಾಗ: ಅತ್ಯುತ್ತಮ ಗಾಯಕ | ಪ್ರಶಸ್ತಿ ವಿಜೇತರು: ಜಸ್ಕರಣ್ ಸಿಂಗ್ | ಚಿತ್ರ: ಕೃಷ್ಣಂ ಪ್ರಣಯಂ ಸಖಿ | ಗೀತೆ: ದ್ವಾಪರ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಟಿ.ಎ. ಶರವಣ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಕಾಸಾಗ್ರ್ಯಾಂಡ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಲಿಪಿ ಜಾಬ್ಸನ್ ಮಾತನಾಡಿದರು.
ಜಸ್ಕರಣ್ ಸಿಂಗ್ 'ಅತ್ಯುತ್ತಮ ಗಾಯಕ'
ಪ್ರಶಸ್ತಿ ವಿಭಾಗ: ಅತ್ಯುತ್ತಮ ಪೋಷಕ ನಟಿ | ಪ್ರಶಸ್ತಿ ವಿಜೇತರು: ಪ್ರಿಯಾ ಷಠಮರ್ಷಣ | ಚಿತ್ರ: ಭೀಮ
ಜನಮೆಚ್ಚಿದ ಚಿತ್ರ: ಶಾಖಾಹಾರಿ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಪಿಪಿ ಸಂಸ್ಥೆಯ ಸ್ಥಾಪಕ ಕಮಲೇಶ್ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮೃಣಾಲ್ ಬಂಕಾಪುರ ಮಾತನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ನಟ ಕಿಶೋರ್
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಇನ್‌ಸೈಟ್ ಐಎಎಸ್ ಸಂಸ್ಥೆಯ ಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ. ವಿನಯಕುಮಾರ್ ಮಾತನಾಡಿದರು.
ಪ್ರಶಸ್ತಿ ವಿಭಾಗ: ಜನ ಮೆಚ್ಚಿದ ಚಿತ್ರ
ಅತ್ಯುತ್ತಮ ನಟಿ: ಅಂಕಿತಾ ಅಮರ್ | ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ
ಅಂಕಿತಾ ಅಮರ್
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಕಾರ, ಮಾಜಿ ಕ್ರಿಕೆಟಿಗ ಶ್ರೀನಿವಾಸ ಮೂರ್ತಿ (ಜಾನಿ) ಮಾತನಾಡಿದರು.
ಅಂಕಿತಾ ಅಮರ್ ಅತ್ಯುತ್ತಮ ನಟಿ
ಅತ್ಯುತ್ತಮ ನಟ: ದುನಿಯಾ ವಿಜಯ್
ದುನಿಯಾ ವಿಜಯ್
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ರಾಮಾ ರಾಮಾ ರೇ ಚಿತ್ರದ ನಟ ನಟರಾಜ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ನಟಿ ಮಮತಾ ರಾಹುತ್ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಕುಬುಸ ಚಿತ್ರದ ನಟಿ ಮಹಾಲಕ್ಷ್ಮಿ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ನಟಿ ರಿಷಾ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಗಾಯಕಿ ಶ್ರುತಿ ಪ್ರಹ್ಲಾದ್ ಮಾತನಾಡಿದರು.
ಪ್ರಶಸ್ತಿ ವಿಭಾಗ: ಅತ್ಯುತ್ತಮ ಪೋಷಕ ನಟ
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಮಾತನಾಡಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಟಿಟಿಕೆ ಪ್ರೆಸ್ಟೀಜ್ ಮಾರ್ಕೆಟಿಂಗ್ ಎಜಿಎಂ ಜಸ್ಟಿನ್ ಆ್ಯಂಟನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಟರಾದ ವಿನಯ್ ರಾಜ್‌ಕುಮಾರ್ ಮತ್ತು ಯುವರಾಜ್‌ಕುಮಾರ್
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಪಿಎನ್ ರಾವ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಆದ ನವೀನ್ ಮತ್ತು ಕೇತನ್ ಮಾತನಾಡಿದರು.
ಪ್ರಶಸ್ತಿ ವಿಭಾಗ: ಅತ್ಯುತ್ತಮ ನಿರ್ದೇಶನ
ಪ್ರಶಸ್ತಿ ವಿಜೇತರು: ನರ್ತನ್
ವರ್ಷದ ಅತ್ಯುತ್ತಮ ಚಿತ್ರ: ಕೃಷ್ಣಂ ಪ್ರಣಯ ಸಖಿ
ಪ್ರಜಾವಾಣಿ ಸಿನಿ ಸಮ್ಮಾನದ ಮೂರನೇ ಆವೃತ್ತಿಗೆ ವರ್ಣರಂಜಿತ ತೆರೆ
ಇಂದು ಅರಮನೆ ಮೈದಾನದಲ್ಲಿ ನಡೆದ ಪ್ರಜಾವಾಣಿ ಸಿನಿ ಸಮ್ಮಾನ 2025 ಕನ್ನಡ ಸಿನಿಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿದ್ದಿತು. ಸಿನಿರಂಗದ ಹಿರಿ–ಕಿರಿ ಕಲಾವಿದರ ಅಪರೂಪದ ಸಂಗಮಕ್ಕೆ ಈ ವೇದಿಕೆ ಸಾಕ್ಷಿಯಾಯಿತು.
2024 ರಲ್ಲಿ ಬಿಡುಗಡೆಯಾಗಿದ್ದ ಹಲವು ಚಿತ್ರಗಳು 27 ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. 27 ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು ಪ್ರತಿಷ್ಠಿತ ಸಿನಿ ಪ್ರಶಸ್ತಿ ಸ್ವೀಕರಿಸಿ ಪುಳಕ ಅನುಭವಿಸಿದರು.
ಸುಮಾರು ಆರು ಗಂಟೆ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಜೊತೆ ಮನರಂಜನೆ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೋರೆಗೊಂಡವು. ಪ್ರಜಾವಾಣಿ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಪ್ರಜಾವಾಣಿ ಸಿನಿ ಸಮ್ಮಾನದ ಮೂರನೇ ಆವೃತ್ತಿಗೆ ಶುಕ್ರವಾರ ರಾತ್ರಿ ವಿದ್ಯುಕ್ತ ತೆರೆ ಬಿದ್ದಿದ್ದು, ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ನಿರ್ದೇಶಕ ಬೈರತಿ ರಣಗಲ್ ನರ್ತನ್, ಅತ್ಯುತ್ತಮ ನಟ ಭೀಮ ಚಿತ್ರಕ್ಕಾಗಿ ದುನಿಯಾ ವಿಜಯ್, ಅತ್ಯುತ್ತಮ ನಟಿ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕಾಗಿ ಅಂಕಿತಾ ಅಮರ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
ಅತ್ಯುತ್ತಮ ಪೋಷಕ ನಟ ಗೋಪಾಲಕೃಷ್ಣ ದೇಶಪಾಂಡೆ, ಅತ್ಯುತ್ತಮ ಪೋಷಕ ನಟಿ ಪ್ರಿಯಾ ಷಠಮರ್ಷಣ, ಅತ್ಯುತ್ತಮ ನೃತ್ಯ ನಿರ್ದೇಶನ ಶೇಖರ್ ಮಾಸ್ಟರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೀವಮಾನ ಸಾಧನೆಗಾಗಿ ಶ್ರೀನಾಥ್ ಮತ್ತು ಸಿನಿ ಧ್ರುವತಾರೆ ವಿ. ರವಿಚಂದ್ರನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವರ್ಷದ ಅತ್ಯುತ್ತಮ ಸಾಧನೆ ಧ್ರುವ ಸರ್ಜಾ, ಅತ್ಯುತ್ತಮ ಗಾಯಕಿ ಶೃತಿ ಪ್ರಲ್ಹಾದ, ಅತ್ಯುತ್ತಮ ಗಾಯಕ ಜಸ್ಕರಣ್ ಸಿಂಗ್, ಅತ್ಯುತ್ತಮ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.