ADVERTISEMENT

ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 12:04 IST
Last Updated 19 ಡಿಸೆಂಬರ್ 2025, 12:04 IST
   

ಮಗು ಜನಿಸಿದ ಬಳಿಕ ಮುಂದಿನ ಮುಟ್ಟು ಆಗುವ ತನಕವೂ ಅವರು ಬಾಣಂತಿ ಆಗಿ ಇರುತ್ತಾರೆ.  ಅವರ ಕೆಲವು ನಿರ್ಲಕ್ಷ್ಯದಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಹಾಗಾಗಿ ಬಾಣಂತಿಯರ ಆರೈಕೆಗೆ ಸಲಹೆಗಳು ಇಲ್ಲಿವೆ.

ಹೆರಿಗೆ ಸಂದರ್ಭದಲ್ಲಿ  ಅಧಿಕ ರಕ್ತಸ್ರಾವ ಆಗುವುದರಿಂದ ಬಾಣಂತಿಯರು ಹೆಚ್ಚು ವಿಶ್ರಾಂತಿ ಪಡೆಯಬೇಕು. ನಗರದ ಅನೇಕ ಬಾಣಂತಿಯರು 15ದಿನ–ಒಂದು ತಿಂಗಳಲ್ಲಿ  ಕೆಲಸ ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ಆ ಕ್ಷಣಕ್ಕೆ ಆರೋಗ್ಯದಲ್ಲಿ ತೊಂದರೆ ಆಗದೆ ಇದ್ದರೂ, ಮುಂದಿನ ದಿನಗಳಲ್ಲಿ ತಾಯಿ ಹಾಗೂ ಮಕ್ಕಳು ಬೇಗನೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಇರುತ್ತದೆ.

ಬಾಣಂತಿಯರ ಪಾಲಿಸಬೇಕಾದ ಕ್ರಮಗಳು

  • ಬಾಣಂತಿ ಸಮಯದಲ್ಲಿ ಅವರ ಆರೋಗ್ಯ ಹಾಗೂ ಮಗುವಿನ ಆರೋಗ್ಯದ ಮೇಲೆ ಜಾಗ್ರತೆ ವಹಿಸಬೇಕು.

    ADVERTISEMENT
  • ಮಗು ಹಾಗೂ ತಾಯಿ ಬೆಚ್ಚಗಿನ ಉಡುಪು ಧರಿಸಬೇಕು.

  • ತಾಯಿ– ಮಗು ಮಲಗುವ ಕೋಣೆ ಶುಚಿಯಾಗಿಬೇಕು

  • ಹೊರಗಡೆ, ಧೂಳಿನ ವಾತಾವರಣಕ್ಕೆ ಹೋಗಬಾರದು

  • ಬಾಣಂತಿ – ಮಗು ಮಲಗುವ ಕೋಣೆಯಲ್ಲಿ ವಾರಕ್ಕೆ ಒಂದು ಬಾರಿ ಧೂಪ,

    ಸಾಂಬ್ರಾಣಿಯನ್ನು ಹೊತ್ತಿಸಿ ‌10–15 ನಿಮಿಷ ಇಡಬೇಕು

  • ಶುಂಠಿ, ಕಾಳು ಮೆಣಸು, ಜೀರಿಗೆ ಸೇರಿಸಿದ ಆಹಾರಗಳನ್ನು ಸೇವಿಸಬೇಕು.

  • ಬಾಣಂತಿ ಸಮಯದಲ್ಲಿ ಒತ್ತಡಕ್ಕೆ ಒಳಗಾಗಬಾರದು, ಆ ಸಂದರ್ಭದಲ್ಲಿ ಮಾನಸಿಕ –ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅನಗತ್ಯ ಒತ್ತಡಕ್ಕೆ ಒಳಗಾದರೆ ಅವರ ಎದೆ ಹಾಲಿನ ಮೇಲೆ ಪರಿಣಾಮ ಬೀರುತ್ತದೆ.

  • ಬಾಣಂತಿಯರ ಜತೆ ಸಕಾರಾತ್ಮಕ ವಿಷಯಗಳನ್ನು ಚರ್ಚಿಸುತ್ತಿರಬೇಕು ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.

(ಲೇಖಕರು: ಬೆಂಗಳೂರಿನ ಆಯುರ್ವೇದ ತಜ್ಞರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.