ADVERTISEMENT

ಹೊಟ್ಟೆಯಲ್ಲಿನ ದುರ್ಮಾಂಸ ನಿವಾರಣೆಗೆ ಆಸನಗಳು

ಶಿವಕುಮಾರ ಜಿ.ಎನ್.
Published 19 ಜೂನ್ 2019, 16:43 IST
Last Updated 19 ಜೂನ್ 2019, 16:43 IST
   

ದೇಹದ ಮೇಲ್ಮೈನ ಗಾಯ, ಬಾವು ಇತ್ಯಾದಿ ಸಮಸ್ಯೆಗಳು ಕಣ್ಣಿಗೆ ಕಾಣಿಸುತ್ತವೆ. ಇವುಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಇದು ಇಂತಹದ್ದೇ ಸಮಸ್ಯೆ ಎಂದು ಗುರುತಿಸುತ್ತೇವೆ. ಆದರೆ, ದೇಹದೊಳಗಿನ ಸಮಸ್ಯೆಗಳನ್ನು ಅರಿಯುವುದೇ ಸವಾಲಿನ ಕೆಲಸ. ತಂತ್ರಜ್ಞಾನದ ಬಳಕೆಯಿಂದ ತಿಳಿಯುವುದು ಸುಲಭ.

ಹೊಟ್ಟೆಯೊಳಗಿನ ಅಜೀರ್ಣ, ಅತಿಭೇದಿ ತಕ್ಷಣಕ್ಕೆ ಗಮನಕ್ಕೆ ಬರುತ್ತವೆ. ಆದರೆ, ಒಳಗಿನ ಬಾವು, ದುರ್ಮಾಂಸ, ಗೆಡ್ಡೆ ಬೆಳೆದಿದ್ದರೆ ಅವು ತಕ್ಷಣಕ್ಕೆ ಗೊತ್ತೇ ಆಗುವುದಿಲ್ಲ. ಅವುಗಳು ಮಿತಿಯನ್ನು ಮೀರಿ ಬೆಳೆದು ತೊಂದರೆ ಕೊಡಲು ಆರಂಭಿಸಿದ ಬಳಿಕವಷ್ಟೇ ವೈದ್ಯರ ಬಳಿಗೆ ಹೋಗಿ ತೋರಿಸಿದಾಗ ಅರಿವಿಗೆ ಬರುತ್ತವೆ.

ಹೊಟ್ಟೆಯೊಳಗಿನ ಬಾವು, ದುರ್ಮಾಂಸ, ಗೆಡ್ಡೆಗಳ ಬೆಳವಣಿಗೆಯನ್ನು ತಡೆದು ಆರೋಗ್ಯ ವೃದ್ಧಿಗೆ ಪೂರಕವಾಗಬಲ್ಲ ಆಸನಗಳ ಪಟ್ಟಿ ಇಲ್ಲಿದೆ.

ADVERTISEMENT

* ಪ್ರಸಾರಿತ ಪಾದೋತ್ತಾನಾಸನ

* ಶೀರ್ಷಾಸನ ಹಾಗೂ ಶೀರ್ಷಾಸನ ಒಳಗೊಂಡ ಆಸನಗಳು

* ಶಲಭಾಸನ, ಉಷ್ಟ್ರಾಸನ

* ಸರ್ವಾಂಗಾಸನ ಹಾಗೂ ಸರ್ವಾಂಗಾಸನಯುಕ್ತ ಆಸನಗಳು

* ಉತ್ಥಿತ ಮತ್ತು ಪರಿವೃತ್ತ ತ್ರಿಕೋನಾಸನ, ತಾಡಾಸನ, ವೀರಭದ್ರಾಸನ, ಪಾರ್ಶ್ವೋತ್ತಾನಾಸನ.

* ಧನುರಾಸನ ಹಾಗೂ ಮುಂದುವರಿದ ಹಂತಗಳು

* ಪಾದಾಂಗುಷ್ಠಾಸನ, ಪಾದಹಸ್ತಾಸನ, ಜಾನುಶೀರ್ಷಾಸನ

* ಮಹಾಮುದ್ರಾ, ಪರ್ವತಾಸನ

* ಸುಪ್ತವೀರಾಸನ, ಮತ್ಸ್ಯಾಸನ, ಪಶ್ಚಿಮೋತ್ತಾನಾಸನ

* ಅರ್ಧಮತ್ಸೇಂದ್ರಾಸನ, ಮಯೂರಾಸನ

* ಉಡ್ಡಿಯಾನ ಬಂಧ(ಇದು ಆಸನವಲ್ಲ)

* ನಾಡಿಶೋಧನ ಅಥವಾ ಉಜ್ಜಾಯೀ ಪ್ರಾಣಾಯಾಮ

ಸೂಚನೆ

ದೇಹದೊಳಗಿನ ತೊಂದರೆ ಆರಂಭಿಕ ಹಂತದಲ್ಲಿದ್ದಾಗ ಅಭ್ಯಾಸದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಸಮಸ್ಯೆ ಹೆಚ್ಚಾಗಿ, ಕೈ ಮೀರಿದ್ದರೆ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.