ADVERTISEMENT

14 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 14:21 IST
Last Updated 14 ಫೆಬ್ರುವರಿ 2026, 14:21 IST
<div class="paragraphs"><p>ಈ ದಿನದ ಪ್ರಮುಖ 10 ಸುದ್ದಿಗಳು</p></div>

ಈ ದಿನದ ಪ್ರಮುಖ 10 ಸುದ್ದಿಗಳು

   

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸಂತ ಸೇವಾಲಾಲ್ ಜಯಂತಿ: ಬೆದರಿಕೆಗೆ ಜಗ್ಗುವ ಮಗ ನಾನಲ್ಲ; ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

ಸೂರಗೊಂಡನಕೊಪ್ಪ (ದಾವಣಗೆರೆ): ‘ನಾನು ವೇದಿಕೆಗೆ ಬಂದಾಗ ಕೆಲ ಯುವಕರು ಕಿರುಚಾಡಿದರು. ಇಂತಹ ಬೆದರಿಕೆಗಳಿಗೆ ಜಗ್ಗುವ ಮಗ ನಾನಲ್ಲ. ಕೆಲವರು ಗೋಬ್ಯಾಕ್ ಅಂತ ಘೋಷಣೆ ಕೂಗಬಹುದು. ಆದರೆ, ಕಂಬ್ಯಾಕ್ ಅಂತ ನಿಲ್ಲುವ ಜನರೂ ಜೊತೆಗಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದರು.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ | ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್

ಸ್ಪೀಕರ್ ಓಂ ಬಿರ್ಲಾ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಣ ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.

ಇರಾನ್‌ನಲ್ಲಿ ಆಡಳಿತ ಬದಲಾವಣೆ: ಡೊನಾಲ್ಡ್‌ ಟ್ರಂಪ್‌ ಒತ್ತಡ

ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ‘ಇರಾನ್‌ನಲ್ಲಿ ಆಡಳಿತ ಬದಲಾವಣೆ ಒಳ್ಳೆಯದು’ ಎಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಮೇಲೆ ಮಿಲಿಟರಿ ಒತ್ತಡವನ್ನು ಹೆಚ್ಚಿಸಲು ಪಶ್ಚಿಮ ಏಷ್ಯಾಕ್ಕೆ ಎರಡನೆಯ ವಿಮಾನವಾಹಕ ನೌಕೆಯನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ. 

T20 World Cup: ಸ್ಕಾಟ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿದ ಇಂಗ್ಲೆಂಡ್

ಬಿರುಸಿನ ಹೊಡೆತವಾಡಿದ ಸ್ಕಾಟ್ಲೆಂಡ್ ಆಟಗಾರ ಜಾರ್ಜ್ ಮುನ್ಸಿ

ಕೋಲ್ಕತ್ತ: ಟಿ20 ವಿಶ್ವಕಪ್‌ನ ಲೀಗ್‌ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಒಗ್ಗಟ್ಟಿನಿಂದ ಇರೋಣ: ಜನರಿಗೆ ಕರೆ ನೀಡಿದ ಬಾಂಗ್ಲಾದೇಶದ ಭಾವಿ ಪ್ರಧಾನಿ ತಾರಿಕ್

ತಾರಿಕ್‌ ರೆಹಮಾನ್‌

ಢಾಕಾ: ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬಿಎನ್‌ಪಿ ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರು ಒಗ್ಗಟ್ಟಿನಿಂದ ಇರುವಂತೆ ದೇಶದ ಜನರಿಗೆ ಕರೆ ನೀಡಿದ್ದಾರೆ.

ಜನ ಕಷ್ಟದಲ್ಲಿದ್ದಾಗ ಕಾಂಗ್ರೆಸ್‌ ಸಂಭ್ರಮಿಸುವುದು ವಿಕೃತಿ: ಸಿ.ಟಿ.ರವಿ

ಸಿ.ಟಿ.ರವಿ

ಮಂಗಳೂರು: ‘ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದಕ್ಕಾಗಿ ಸಂಭ್ರಮ ಆಚರಿಸಿದೆ. ಈ ಸಂಭ್ರಮ ಏಕೆ ಎಂದು ಅರ್ಥವಾಗುತ್ತಿಲ್ಲ. ಆಡಳಿತದ ಬಗ್ಗೆ ಜನ ಸಂತೃಪ್ತರಾಗಿದ್ದರೆ, ಸರ್ಕಾರ ಸಂಭ್ರಮಿಸಬಹುದಿತ್ತು. ಆದರೆ, ಜನ ಕಷ್ಟದಲ್ಲಿರುವಾಗ ಕಾಂಗ್ರೆಸ್‌ನವರು ಸಂಭ್ರಮಿಸುತ್ತಿರುವುದು ವಿಕೃತಿ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ರಾಹುಲ್‌ ಗಾಂಧಿ ಸುಳ್ಳುಗಳ ಬಗ್ಗೆ ಜನರಿಗೆ ಅರಿವಿದೆ: ಅಮಿತ್ ಶಾ

ಅಮಿತ್ ಶಾ

ಕರೈಕಲ್‌(ಪುದುಚೇರಿ): ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಎಫ್‌ಟಿಎ ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸುಳ್ಳು ಹೇಳುವ ಮೂಲಕ ರಾಹುಲ್‌ ಗಾಂಧಿ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ಗೆ ಕಪ್ಪು ಬಟ್ಟೆ ಪ್ರದರ್ಶನ; ಮುಜುಗರಕ್ಕೆ ಒಳಗಾದ ಡಿಸಿಎಂ

ಡಿ.ಕೆ.ಶಿವಕುಮಾರ್

ಸೂರಗೊಂಡನಕೊಪ್ಪ: ಇಲ್ಲಿನ ಭಾಯಾಗಡ್‌ದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‌ ಅವರ 287ನೇ ಜಯಂತಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಜಾರ ಸಮುದಾಯದ ಜನರು ಕಪ್ಪು ಬಟ್ಟೆ ಪ್ರದರ್ಶಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂದು ವಿರೋಧ ದಾಖಲಿಸಿದರು.

ಸೂರ್ಯ, ಸಾಯಿ ಪಲ್ಲವಿ ಸೇರಿ ಹಲವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

ಸಿನಿ ತಾರೆಯರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

ತಮಿಳುನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಚೆನ್ನೈನ ಕಲೈವಾನರ್ ಅರಂಗಂ ಸಭಾಂಗಣದಲ್ಲಿ ನಡೆಯಿತು. ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಶಿವರಾತ್ರಿ ಜಾಗರಣೆಯನ್ನು ಹೀಗೆ ಆಚರಿಸಿ

ಶಿವ

ಜಾಗರಣೆ ಮಹಾಶಿವರಾತ್ರಿಯ ಒಂದು ಭಾಗ. ಅಪರೂಪಕ್ಕೆ ಎಚ್ಚರ ಇರಬೇಕು ಎಂದರೆ ಎಂತಹವರಿಗೂ ಕಷ್ಟವೇ. ಹೀಗಾಗಿ ಶಿವರಾತ್ರಿ ಜಾಗರಣೆಯನ್ನು ಹೇಗೆಲ್ಲ ಮಾಡಬಹುದು ಎನ್ನುವುದಕ್ಕೆ ಸಲಹೆ ಇಲ್ಲಿದೆ.

ಕೆಳಗಿನ ಇದನ್ನೂ ಓದಿ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.