ಮೊಹಮ್ಮದ್ ಸಿರಾಜ್
ಕೃಪೆ: ಪಿಟಿಐ
ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಭಾರತದ ಪರ ವಿದೇಶಿ ಪಿಚ್‌ಗಳಲ್ಲಿ 100 ವಿಕೆಟ್ ಸಾಧನೆ ಮಾಡಿದ 7ನೇ ವೇಗದ ಬೌಲರ್ ಎನಿಸಿದ್ದಾರೆ.
ಸಿರಾಜ್ ಪ್ರಸಕ್ತ ಸರಣಿಯಲ್ಲಿ (5 ಪಂದ್ಯ, 9 ಇನಿಂಗ್ಸ್) 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ತವರಿನಿಂದ ಆಚೆ 27 ಟೆಸ್ಟ್‌ಗಳಲ್ಲಿ ಬೌಲಿಂಗ್ ಮಾಡಿರುವ ಅವರ ಖಾತೆಯಲ್ಲಿ ಒಟ್ಟು 100 ವಿಕೆಟ್‌ಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 41 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಿರಾಜ್, ನಾಲ್ಕು ಬಾರಿ 5 ವಿಕೆಟ್ ಗೊಂಚಲು ಸಹಿತ 120 ವಿಕೆಟ್ ಕಬಳಿಸಿದ್ದಾರೆ.
12ನೇ ಬೌಲರ್ ಸಿರಾಜ್
ಸಿರಾಜ್‌ಗೂ ಮೊದಲು ಸ್ಪಿನ್ನರ್‌ಗಳೂ ಸೇರಿದಂತೆ 11 ಬೌಲರ್‌ಗಳು ಭಾರತ ಪರ ವಿದೇಶಿ ಪಿಚ್‌ಗಳಲ್ಲಿ 'ಶತಕ'ದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಅವರು, 69 ಪಂದ್ಯಗಳಲ್ಲಿ 269 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ದ್ವಿಶತಕ ಗಡಿ ದಾಟಿರುವ ಕಪಿಲ್ ದೇವ್, ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ಅವರು ಕ್ರಮವಾಗಿ 2, 3 ಹಾಗೂ 4ನೇ ಸ್ಥಾನಗಳಲ್ಲಿ ಇದ್ದಾರೆ.
ವಿದೇಶಿ ಪಿಚ್‌ಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ಗಳು
ಇಂಗ್ಲೆಂಡ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.