ADVERTISEMENT

ಏಕದಿನ ಕ್ರಿಕೆಟ್‌ ಸಾಯುತ್ತಿದೆಯೇ: ಯುವರಾಜ್‌ ಸಿಂಗ್‌ ಆತಂಕಕ್ಕೆ ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2023, 15:06 IST
Last Updated 15 ಜನವರಿ 2023, 15:06 IST
   

ತಿರುವನಂತಪುರ: ಭಾರತ-ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ತಿರುವನಂತಪುರ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಿರುವುದರ ಬಗ್ಗೆ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಅವರು ‘ಏಕದಿನ ಕ್ರಿಕೆಟ್‌ ಅವಸಾನಗೊಳ್ಳುತ್ತಿದೆಯೇ’ ಎಂದು ಪ್ರಶ್ನೆ ಕೇಳಿದ್ದಾರೆ.

‘ಶುಭಮನ್ ಗಿಲ್ ಚೆನ್ನಾಗಿ ಆಡಿದ್ದಾರೆ. ಆಶಾದಾಯಕವಾಗಿ, ಮತ್ತೊಂದೆಡೆ ವಿರಾಟ್‌ ಕೊಹ್ಲಿಯೂ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಅರ್ಧ ಖಾಲಿಯಾಗಿ ಉಳಿದ ಕ್ರೀಡಾಂಗಣ ನನ್ನಲ್ಲಿ ಆತಂಕ ಮೂಡಿಸಿದೆ. ಏಕದಿನ ಕ್ರಿಕೆಟ್ ಸಾಯುತ್ತಿದೆಯೇ? ಎಂದು ಅವರು ಪೋಸ್ಟ್‌ ಪ್ರಕಟಿಸಿದ್ದಾರೆ.

ADVERTISEMENT

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೇ ಪಂದ್ಯ ಇಂದು ತಿರುವನಂತಪುರದಲ್ಲಿ ನಡೆಯಿತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ, ಔಟಾಗದೇ 166 (110)ರನ್‌ ಗಳಿಸಿ ಮಿಂಚಿದರೆ, ಶುಭಮನ್‌ ಗಿಲ್‌ ಅವರು 116 (97) ರನ್‌ ಗಳಿಸಿ ಗಮನಸೆಳೆದರು. ಈ ಪಂದ್ಯದಲ್ಲಿ ಭಾರತವು 317 ರನ್‌ಗಳಿಂದ ಗೆದ್ದು ಬೀಗಿದೆ. 3–0 ಮೂಲಕ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.