ADVERTISEMENT

ಬೇಸಿಗೆಯಲ್ಲಿ ದೈಹಿಕ ಬಳಲಿಕೆ ನಿವಾರಣೆ ಹೇಗೆ?

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:41 IST
Last Updated 19 ಜೂನ್ 2019, 16:41 IST
yoga
yoga   

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತುಸು ದೂರ ನಡೆದರೂ ದೇಹಕ್ಕೆ ಆಯಾಸ ಎನಿಸುವಷ್ಟರಮಟ್ಟಿಗೆ ರಣಬಿಸಿಲಿದೆ. ಬಿಸಿಲ ತಾಪ, ಮೈಗೆ ರಾಚುವ ಬಿಸಿ ಗಾಳಿಗೆ ಚರ್ಮ ಕಪ್ಪಿಡುತ್ತಿದೆ. ಎಷ್ಟು ನೀರು, ಮಜ್ಜಿಗೆ, ತಂಪು ಪಾನಿಯ ಸೇವಿಸಿದರೂ ದಾಹ ನೀಗುತ್ತಿಲ್ಲ.

ನೆರಳನ್ನು ಬಯಸಿ ಗಿಡ, ಮರಗಳ ಅಡಿ ನಿಂತರೂ ದೇಹಕ್ಕಾಗುತ್ತಿರುವ ಆಯಾಸ, ಬಳಲಿಕೆ ಕಡಿಮೆಯಾಗುತ್ತಿಲ್ಲ. ಇನ್ನು ಬೇಸಿಗೆ(Summer) ದಿನಗಳಲ್ಲಿ ದೈಹಿಕ ಶ್ರಮದಾಯಕ ಕೆಲಸಗಳು, ಕಸರತ್ತುಗಳು, ಆಟೋಟ, ವ್ಯಾಯಾಮ ಅಭ್ಯಾಸದಲ್ಲಿ ತೊಡಗಿದರೂ ಆಯಾಸ ಉಂಟಾಗುತ್ತದೆ.

ದೇಹಕ್ಕೆ ಉಂಟಾಗುವ ಹೆಚ್ಚಿನ ಶ್ರಮ, ಆಯಾಸ ಹಾಗೂ ಬಳಲಿಕೆಯನ್ನು ತಡೆದು, ಚೈತನ್ಯ ತುಂಬುವಲ್ಲಿ ನೆರವಾಗುವ ಆಸನಗಳ ಪಟ್ಟಿ ಇಲ್ಲಿದೆ.

ADVERTISEMENT

* ಹಲಾಸನ

* ಪಶ್ಚಿಮೋತ್ತಾನಾಸನ

* ಊರ್ಧ್ವಮುಖ ಪಶ್ಚಿಮೋತ್ತಾನಾಸನ

* ಅಧೋಮುಖ ಶ್ವಾನಾಸನ

* ಸರ್ವಾಂಗಾಸ ಮತ್ತು ಅದರ ಹಂತಗಳು

* ಶೀರ್ಷಾಸನ ಹಾಗೂ ಅದರ ಹಂತಗಳು

* ಉತ್ತಾನಾಸನ, ಮಾಲಾಸನ

* ಪಾಶಾಸನ, ಅರ್ಧಮತ್ಸ್ಯೇಂದ್ರಾಸನ

* ದ್ವಿಪಾದ ವಿಪರೀತ ದಂಡಾಸನ

* ನಾಡಿಶೋಧನ ಪ್ರಾಣಾಯಾಮ(ಕುಂಭಕ ರಹಿತ)

* ಶವಾಸನ

ಶ್ವಾಸಕೋಶ ಉರಿಯೂತತಡೆ ಹೇಗೆ?

ಕಲುಷಿತ/ಮಾಲಿನ್ಯಯುಕ್ತ ಗಾಳಿ ಸೇವನೆಯಿಂದ ಮೂಗು ಮಾತ್ರವಲ್ಲ ಶ್ವಾಸಕೋಶವೂ ಹಾನಿಗೊಳಗಾಗುತ್ತಿದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ, ತೇವಾಂಶ ಇಲ್ಲದ ಶುಷ್ಕವಾದ ಬಿಸಿಗಾಳಿ ಸೇವನೆ, ಅತಿಯಾದ ಉಷ್ಣವಿರುವ ಸ್ಥಳಗಳಲ್ಲಿ ಹೆಚ್ಚು ಸಮಯ ಕೆಲಸ ನಿರ್ವಹಿಸುವುದು, ಬೀಡಿ, ಸಿಗರೇಟ್ ಸೇವನೆ ಇತ್ಯಾದಿ ಕಾರಣಗಳಿಂದ ಶ್ವಾಸಕೋಶಗಳಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ದೇಹಕ್ಕೆ ಜೀವ ಚೈತನ್ಯ ತುಂಬುವ ಶ್ವಾಸಕೋಶಗಳಲ್ಲಿ ಉರಿಯೂತ ತಡೆಗೆ ನೆರವಾಗಬಲ್ಲ ಆಸನಗಳು ಹಾಗೂ ಪ್ರಾಣಾಯಾಮಗಳ ಪಟ್ಟಿ ಇಲ್ಲಿದೆ.

* ಮಹಾಮುದ್ರಾ(ಇದು ಆಸನವಲ್ಲ)

* ಅಧೋಮುಖ ಶ್ವಾನಾಸನ

* ವೀರಾಸನ

* ಸಿದ್ಧಾಸನ

* ಶೀರ್ಷಾಸನ ಹಾಗೂ ಅದರ ಹಂತಗಳು

* ಸರ್ವಾಂಗಾಸನ ಮತ್ತು ಅದರ ಹಂತಗಳು

* ಹಲಾಸನ, ಪಶ್ಚಿಮೋತ್ತಾನಾಸನ

* ಪದ್ಮಾಸನ, ಬದ್ಧಪದ್ಮಾಸನ

* ಬದ್ಧಕೋನಾಸನ

* ನಾಡಿ ಶೋಧನ ಪ್ರಾಣಾಯಾಮ

* ಸೂರ್ಯ ಭೇದನ ಪ್ರಾಣಾಯಾಮ

* ಶವಾಸನ

ಗಮನಿಸಿ

ಆಯಾಸ ಆದಾಗ ಹೆಚ್ಚು ಅಭ್ಯಾಸಕ್ಕೆ ತೊಡಗಬೇಡಿ. ನಿತ್ಯ ಅಭ್ಯಾಸ ನಡೆಸಿದರೆ, ದೇಹಕ್ಕೆ ಮುಂದೆ ಎದುರಾಗ ಬಹುದಾದ ಬಳಲಿಕೆ, ಆಯಾಸವನ್ನು ನೀಗಿಸುವ ಶಕ್ತಿಯನ್ನು ತುಂಬುತ್ತವೆ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.