ADVERTISEMENT

ಸ್ಪೀಕರ್‌ರಿಂದ ಕರಾಳ ಅಧ್ಯಾಯ ಆರಂಭ: ಪ್ರಹ್ಲಾದ ಜೋಶಿ

ಅನರ್ಹ ಶಾಸಕರ ಪರವಾಗಿ ಬಿಜೆಪಿ ನಿಲ್ಲಲಿದೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 13:10 IST
Last Updated 28 ಜುಲೈ 2019, 13:10 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಹುಬ್ಬಳ್ಳಿ: ‘ರಾಜೀನಾಮೆ ನೀಡಿದ ಅತೃಪ್ತ ಶಾಸಕರನ್ನು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅನರ್ಹಗೊಳಿಸುವ ಮೂಲಕ ಹೊಸದೊಂದು ಕರಾಳ ಅಧ್ಯಾಯ ಆರಂಭಿಸಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವ ಮೂಲಕ ರಮೇಶ್‌ಕುಮಾರ್‌ ಅವರು ತಮ್ಮ ವ್ಯಕ್ತಿತ್ವ ಹಾಗೂ ಹುದ್ದೆಗೆ ಅವಮಾನ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶಾಸಕರ ರಾಜೀನಾಮೆ ಪತ್ರವನ್ನು ತಿಂಗಳವರೆಗೂ ಇಟ್ಟುಕೊಂಡು ಇದೀಗ ಅನರ್ಹಗೊಳಿಸಿರುವುದು ಸರಿಯಾದ ನಡೆಯಲ್ಲ. ಇಷ್ಟರೊಳಗೇ ರಾಜೀನಾಮೆಯನ್ನು ಸ್ಪೀಕರ್‌ ಅಂಗೀಕಾರ ಮಾಡಬೇಕಾಗಿತ್ತು ಎಂದರು.

ಪ್ರಜಾಪ್ರಭುತ್ವ ಉಳಿವಿಗಾಗಿ ಅನರ್ಹ ಶಾಸಕರ ಪರವಾಗಿ ಬಿಜೆಪಿ ನಿಲ್ಲಲಿದೆ. ಸ್ಪೀಕರ್‌ ಬಗ್ಗೆ ನಾವೇನು ಅಂದುಕೊಂಡಿದ್ದೆವೋ ಅದೇ ರೀತಿ ಅವರು ನಡೆದುಕೊಂಡಿದ್ದಾರೆ ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.