ADVERTISEMENT

ನೀವು ಸೆಲೆಬ್ರಿಟಿಗಳಂತೆ ಕಾಣಬೇಕೇ? ಹೊಸ ವರ್ಷಕ್ಕೆ ಹೀಗೆ ತಯಾರಾಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2025, 8:08 IST
Last Updated 30 ಡಿಸೆಂಬರ್ 2025, 8:08 IST
<div class="paragraphs"><p>ಶಿಲ್ಪಾ ಶೆಟ್ಟಿ, ಶ್ರೀ ಲೀಲಾ</p></div>

ಶಿಲ್ಪಾ ಶೆಟ್ಟಿ, ಶ್ರೀ ಲೀಲಾ

   

ಹೊಸ ವರ್ಷಕ್ಕೆ ಹೊಸದಾಗಿ ಏನಾನ್ನಾದರೂ ಪ್ರಯತ್ನಿಸಬೇಕೆಂಬುವುದು ಈಗಿನ ಟ್ರೆಂಡ್‌. ಇದಕ್ಕೆ ಫ್ಯಾಷನ್‌ ಲೋಕವೂ ಹೊರತಲ್ಲ. ದಿನದಿಂದ ದಿನಕ್ಕೆ ಫ್ಯಾಷನ್‌ ಜಗತ್ತು ಹೊಸತನವನ್ನು ಹೊತ್ತು ತರುತ್ತದೆ, ಈ ಬದಲಾವಣೆಗೆ ಫ್ಯಾಷನ್‌ ಪ್ರಿಯರು ಒಗ್ಗಿಕೊಂಡಿದ್ದಾರೆ.

2026ರ ಹೊಸವರ್ಷಕ್ಕೆ ಇನ್ನೊಂದು ದಿನ ಬಾಕಿ ಇದೆ. ಮಹಿಳೆಯರು ಸೇರಿದಂತೆ ಯುವತಿಯರು ಹೊಸ ವರ್ಷಕ್ಕೆ ಹೇಗೆಲ್ಲ ತಯಾರಾಗಬೇಕು, ಯಾವ ಬಟ್ಟೆ, ಆಭರಣ ತೊಟ್ಟರೆ ಸುಂದರವಾಗಿ ಕಾಣಬಹುದು, ಯಾವ ರೀತಿ ಮೇಕಪ್‌ ಮಾಡಿಕೊಂಡರೆ ಹೊಸ ವರ್ಷದಂದು ಮಿಂಚಬಹುದು. ಹೀಗೆ ತಮ್ಮದೇ ಆಲೋಚನೆಯಲ್ಲಿ ಮುಳುಗಿರುತ್ತಾರೆ. ವರ್ಷದ ಮೊದಲ ದಿನದಂದು ಸುಲಭವಾಗಿ ತಯಾರಾಗಲು ಕೆಳಕಂಡ ಲುಕ್‌ಗಳಲ್ಲಿ ಯಾವುದು ನಿಮಗೆ ಸೂಕ್ತ ಆಯ್ಕೆ ಮಾಡಿಕೊಳ್ಳಿ.

ಸಿಂ‍ಪಲ್‌ ಲುಕ್‌

ಕಾಲೇಜಿಗೆ ಹೋಗುವ ಯುವತಿಯರು ಹೆಚ್ಚು ಮೇಕ‍‌ಪ್‌ ಇಷ್ಟಪಡುವುದಿಲ್ಲ. ಸಿಂಪಲ್‌ ಲುಕ್‌ ಅನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಜೀನ್ಸ್‌ ಮತ್ತು ಟೀ ಶಾರ್ಟ್‌ ಅಥವಾ ಸಿಂಪಲ್‌ ಕುರ್ತಿ ಜತೆಗೆ ಅದಕ್ಕೆ ಸರಿ ಹೊಂದುವ ಆಭರಣ ಧರಿಸಿದರೆ ನಿಮ್ಮ ಸಿಂಪಲ್‌ ಲುಕ್‌ ಸಹ ಎಲಿಗೆಂಟ್‌ ಆಗಿ ಕಾಣುತ್ತದೆ. ‌ನೋ ಮೇಕಪ್‌ ಲುಕ್‌ ಆಯ್ಕೆ ಉತ್ತಮ.

ನೋ ಮೇಕಪ್‌ ಲುಕ್‌ ಎಂದರೆ ಮೇಕಪ್‌ ಮಾಡಿಕೊಳ್ಳದೇ ಇರುವುದು ಎಂದರ್ಥವಲ್ಲ. ಹೆಚ್ಚು ಮೇಕಪ್‌ ಉತ್ಪನ್ನಗಳನ್ನು ಬಳಸದೇ ತಯಾರಾಗುವುದು. ತುಟಿ ಬಣ್ಣ ಹಾಗೂ ಕಣ್ಣಿನ ಮೇಕಪ್‌ ಮಾಡಲು ನ್ಯೂಟ್ರಲ್‌ ಕಲರ್‌ ಥಿಯರಿ ಬಳಸುವುದು. ಫೌಂಡೇಶನ್‌ ಬದಲು ಕನ್ಸೀಲರ್ ಅಥವಾ ಬಿಬಿ ಕ್ರೀಮ್‌ಗಳು ಬಳಸುವುದು ಒಳ್ಳೆಯದು. ಸಿನಿಮಾಗಳಲ್ಲಿ ಹೊರತುಪಡಿಸಿದರೆ ಹೆಚ್ಚಿನ ನಟಿಯರು ನೋ ಮೇಕಪ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಅನುಪಮಾ ಪರಮೇಶ್ವರನ್

ಸಾಂಪ್ರದಾಯಿಕ ಲುಕ್‌:

ಮಹಿಳೆಯರು ಸೀರೆ, ಬಳೆ, ಹೂವು ಮುಡಿದುಕೊಂಡು ಭಾರತೀಯ ಸಂಸ್ಕೃತಿಗೆ ತಕ್ಕಂತೆ ತಮ್ಮ ಲುಕ್‌ ಅನ್ನು ವಿನ್ಯಾಸಗೊಳಿಸಿಕೊಳ್ಳುತ್ತಾರೆ. ಈಗಂತೂ ಸೀರೆಗಳ ಡಿಸೈನ್‌ಗಳು ರಾಶಿ ರಾಶಿ ಬಂದಿವೆ. ಮೈಸೂರು ಸಿಲ್ಕ್‌ ಸೀರೆಗಳು, ಕಾಂಚೀವರಂ, ಬನರಾಸಿ, ಕೊಚಂಪೆಲ್ಲಿ, ಕೇರಳ ಕಸುವು ಸೀರೆ ಹೀಗೆ ವಿಭಿನ್ನ ಮಾದರಿ ಸೀರೆಗಳು ಇದೀಗ ಅದ್ಭುತ ಡಿಸೈನ್‌ಗಳಲ್ಲಿ ಲಭ್ಯವಿದೆ. ಸೀರೆ ಇಷ್ಟಪಡದೇ ಇರುವವರು ಚೂಡಿದಾರ್ ಅಥವಾ ಲೆಹೆಂಗಾ ತೊಡಬಹುದು.

ಸಿಂಪಲ್‌ ಸೀರೆಗಳ ಮೊರೆ ಹೋಗುತ್ತೇವೆ ಎಂದರೆ ಕಾಟನ್‌ ಸೀರೆ, ಕಲಂಕಾರಿ, ಸಾಫ್ಟ್‌ ಸಿಲ್ಕ್ ಸೀರೆಗಳನ್ನು ಉಡಬಹುದು. ಇದು ಆಫೀಸ್‌ ಅಥವಾ ಕಾಲೇಜು ಯುವತಿಯರಿಗೆ ಉತ್ತಮ ಆಯ್ಕೆ.

ಸೀರೆಗಳಿಗೆ ಸರಿ ಹೊಂದುವ ರೀತಿಯಲ್ಲಿ ಆಭರಣಗಳನ್ನು ತೊಟ್ಟರೆ ನಿಮ್ಮ ಲುಕ್‌ ಮತ್ತಷ್ಟು ರಿಚ್‌ ಆಗಿ ಕಾಣುತ್ತದೆ. ಸಾಂಪ್ರದಾಯಕ ಲುಕ್‌ನಲ್ಲಿ ನಿಮ್ಮ ಕಣ್ಣುಗಳ ಮೇಕಪ್‌ನ್ನದ್ದೇ ಪಾರುಪತ್ಯ. ಕಾಜಲ್‌ ಹಾಗೂ ಐಲೈನಬರ್ ನಿಮ್ಮ ಲುಕ್‌ ಅನ್ನೇ ಚೇಂಚ್‌ ಮಾಡುತ್ತದೆ.

ಸಂಗ್ರಹ ಚಿತ್ರ 

ಹೈ ಫ್ಯಾಷನ್‌ ಲುಕ್‌

ಪಾರ್ಟಿ, ಪಬ್‌ಗಳಿಗೆ ಹೋಗುವ ಯುವತಿಯರಿಗೆ ಐ ಫ್ಯಾಷನ್‌ ಲುಕ್‌ ಆಯ್ಕೆ ಉತ್ತಮ. ಪಾರ್ಟಿ ಡ್ರೆಸ್‌ಗಳು ಜತೆ ಅವರ ಮೇಕಪ್‌ ಸಹ ಬೋಲ್ಡ್‌ ಆಗಿ ಇರುತ್ತದೆ. ಡ್ರೆಸ್‌ ಬದಲು ಈಗಂತೂ ಪಾರ್ಟಿ ವೇರ್ ಸೀರೆಗಳು ಲಭ್ಯ. ಮೇಕಪ್‌ ವಿಷಯಕ್ಕೆ ಬಂದರೆ ಐ ಶ್ಯಾಡೋ, ಐಲೈನರ್‌, ಕಾಜಲ್‌ ಹಾಗೂ ತುಟಿ ಬಣ್ಣ ಎಲ್ಲವೂ ಬೋಲ್ಡ್‌ ಕಲರ್‌ ( ಡಾರ್ಕ್‌ ಕಲರ್‌ ಶೇಡ್‌) ಆಯ್ಕೆ ಮಾಡಿಕೊಳ್ಳಬೇಕು. ಪಾರ್ಟಿ ಹೀಲ್ಸ್‌ಗಳು ನಿಮ್ಮ ಲುಕ್‌ಗೆ ಮತ್ತಷ್ಟು ಹೊಳಪು ನೀಡುವುದಂತೂ ಖಚಿತ.

ಸಂಗ್ರಹ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.