ADVERTISEMENT

ಬಿಗ್‌ಬಾಸ್ ಮನೆಯಲ್ಲಿ ತಮ್ಮ ಪ್ರೇಯಸಿ ಬಗ್ಗೆ ಹೇಳಿಕೊಂಡ ‘ಕನಸುಗಾರ’ ರವಿಚಂದ್ರನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 12:44 IST
Last Updated 18 ಡಿಸೆಂಬರ್ 2025, 12:44 IST
   

ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ 81ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಬಿಬಿ ಮನೆಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೇಶಿಸಿದ್ದಾರೆ.

ಬಿಗ್‌ಬಾಸ್ ಮನೆಗೆ ನಟ ರವಿಚಂದ್ರನ್ ಆಗಮಿಸಿ, ಅವರ ನಟನೆಯ ‘ಪ್ಯಾರ್’ ಚಿತ್ರವನ್ನು ಪ್ರಚಾರ ಮಾಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ  ಬಿಬಿ ಸ್ಪರ್ಧಿ ರಾಶಿಕಾ ಅವರು ಅಭಿನಯಿಸಿದ್ದಾರೆ. ಅಲ್ಲದೆ ಈ ಚಿತ್ರದ ‘ಒಂದೇ ಮಾತಾಲಿ ಹೇಳೋದಾದರೆ’ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಇನ್ನೂ, ಬಿಗ್‌ಬಾಸ್ ಮನೆಯಲ್ಲಿ ಮಾತಾನಾಡಿರುವ ನಟ ರವಿಚಂದ್ರನ್ ಅವರು, ‘ ಕಾಲೇಜು ಸೇರಿದ ಮೊದಲ ದಿನ ನಾನು ರಾಜ್‌ಕುಮಾರ್ ಅವರು ಓಡಿಸಿದ ಮೋಟಾರ್ ಬೈಕ್‌ನಲ್ಲಿ ಕಾಲೇಜು ಸುತ್ತಿದ್ದೆ. ಆ ದಿನ ಹುಡಿಗರಲ್ಲಿ ಗುಂಪಲ್ಲಿ ಒಬ್ಬಳು ನನ್ನ ಕಣ್ಣಿಗೆ ಬಿದ್ದಳು. ಅವಳೆ ನನ್ನ ಮೊದಲ ಪ್ರೇಯಸಿ. ಒಂದು ವರ್ಷ ಮುಖಾಮುಖಿ ಆಗಿ ನೋಡುತ್ತಿದ್ಧೇವು.

ADVERTISEMENT

ಪ್ರೀತಿ ಹೇಳಿಕೊಳ್ಳಲು ಧೈರ್ಯ ಮಾಡಲಿಲ್ಲ. ಒಂದು ದಿನ ಅವಳು ಮಾತನಾಡಿಸಲು ಕಾಲೇಜು ಬಳಿ ಹೋದೆ. ಅವಳಿಗೆ ನಾನು ಕಾರಲ್ಲಿ ಡ್ರಾಪ್ ಕೊಡುತ್ತೇನೆ ಎಂದೆ. ಆದರೆ ಅವಳು ಬರಲಿಲ್ಲ. ಆ ಬೇಸರಕ್ಕೆ ಒಂದು ವಾರ ಕಾಲೇಜಿಗೆ ಹೋಗಲಿಲ್ಲ. ಕೆಲವು ವಾರಗಳ ಬಳಿಕ ಅವಳೆ ನನ್ನ ಫೋನ್ ನಂಬರ್‌ಗೆ ಕರೆ ಮಾಡಿದ್ದಳು. ಅಲ್ಲಿಂದ ನಮ್ಮ ಪ್ರೀತಿ ಆರಂಭವಾಯಿತು‘ ಎಂದು  ಕ್ರೇಜಿಸ್ಟಾರ್ ರವಿಚಂದ್ರನ್ ಅವರು  ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಬಳಿ  ತಮ್ಮ ಪ್ರೀತಿಯ ದಿನಗಳನ್ನು ಮೆಲುಕು ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.