ADVERTISEMENT

ಸಂಕಲನ | ಇಲ್ಲಿದೆ ರಾಜ್ಯದ 14 ಕದನ ಕಣಗಳ ಸಮಗ್ರ ಚಿತ್ರಣ

ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 9:01 IST
Last Updated 9 ಮೇ 2019, 9:01 IST
   

ಬೆಂಗಳೂರು:ರಾಜ್ಯದಲ್ಲಿ ಇಂದು (ಏಪ್ರಿಲ್‌ 23) ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಒಟ್ಟು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಗುಲಬರ್ಗಾ, ಶಿವಮೊಗ್ಗ, ಧಾರವಾಡ, ಬೀದರ್‌, ಬೆಳಗಾವಿ ಹಾಗೂ ಬಾಗಲಕೋಟೆ ಸೇರಿದಂತೆ ಗಮನ ಸೆಳೆದಿರುವ ಕ್ಷೇತ್ರಗಳ ಪಟ್ಟಿ ದೊಡ್ಡದು.

ಹದಿನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿರುವ 2.67 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.ರಾಜ್ಯದ ಬಿರುಬಿಸಿಲಿನ ಭಾಗದಲ್ಲಿರುವ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಗುಲಬರ್ಗಾ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ADVERTISEMENT

ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ಅನಂತಕುಮಾರ್‌ ಹೆಗಡೆ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಧು ಬಂಗಾರಪ್ಪ, ಸಂಸದರಾದ ಬಿ.ವೈ. ರಾಘವೇಂದ್ರ, ಜಿ.ಎಂ. ಸಿದ್ದೇಶ್ವರ, ಪ್ರಹ್ಲಾದ ಜೋಶಿ, ಕರಡಿ ಸಂಗಣ್ಣ, ಪ್ರಕಾಶ ಹುಕ್ಕೇರಿ, ಶಿವಕುಮಾರ್‌ ಉದಾಸಿ ಕಣದಲ್ಲಿರುವ ಪ್ರಮುಖರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯಿಂದಾಗಿ ಟಿಕೆಟ್‌ ಹಂಚಿಕೆಯಲ್ಲಿ ಉಂಟಾದ ಗೊಂದಲ, ನಾಯಕರ ವಾದ–ವಿವಾದ, ಸ್ಥಳೀಯ ಮುಖಂಡರ ಮುನಿಸು, ಟಿಕೆಟ್‌ ವಂಚಿತರ ಬಂಡಾಯ, ಪಕ್ಷ ತೊರೆದು ಬಂದವರು, ಹಾಲಿ–ಮಾಜಿ ಸಂಸದರ ಮುಖಾಮುಖಿ, ಪ್ರಧಾನಿ ಮೋದಿ ಅಬ್ಬರದ ಪ್ರಚಾರ...ಈ ಎಲ್ಲ ಕಾರಣಗಳಿಂದಾಗಿ ರಾಜ್ಯದ ಎರಡನೇ ಹಂತದ ಮತದಾನ ಕುತೂಹಲ ಉಂಟು ಮಾಡಿದೆ.

ಬೆಳಿಗ್ಗೆ 7ರಿಂದ ಸಂಜೆ 6ರವರೆಗೂ ಮತದಾನ ನಡೆಯಲಿದ್ದು, ಬಿರುಬಿಸಿಲು ಸಹಾ ಮತದಾರರ ಮೇಲೆ ಪರಿಣಾಮ ಬೀರಬಹುದಾದ ಅಂಶಗಳಲ್ಲೊಂದಾಗಿದೆ.

ಚುನಾವಣಾ ಕಣದಲ್ಲಿ ಈವರೆಗೆ ನಡೆದಿರುವ ಬೆಳವಣಿಗೆಗಳು, ಅಪರೂಪದ ಸಂದರ್ಶನಗಳು, ಕ್ಷೇತ್ರದ ದರ್ಶನ, ಕ್ಷೇತ್ರದಲ್ಲಿನ ಟ್ರೆಂಡ್‌ ಹೇಳುವ ‘ಅಖಾಡದಲ್ಲೊಂದು ಸುತ್ತು’, ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುವ ‘ಕ್ಷೇತ್ರನೋಟ’ದ ಲಿಂಕ್‌ಗಳು ಕೆಳಗಿವೆ. ಈ ಲಿಂಕ್‌ಗಳನ್ನು ಬಳಸಿ ನೀವು ಚುನಾವಣಾ ಕಣದ ಸಮಗ್ರ ಪರಿಚಯ ಮಾಡಿಕೊಳ್ಳಬಹುದು.

ಬೆಳಗಾವಿ ಕ್ಷೇತ್ರ:ಸುರೇಶ ಅಂಗಡಿ, ಡಾ.ವಿ.ಎಸ್‌. ಸಾಧುನವರ

1.ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ...

ಚಿಕ್ಕೋಡಿ ಕ್ಷೇತ್ರ– ಪ್ರಕಾಶ ಹುಕ್ಕೇರಿ, ಅಣ್ಣಾ ಸಾಹೇಬ ಜೊಲ್ಲೆ

2.ಚಿಕ್ಕೋಡಿ ಕಣ ಹೀಗಿದೆ...

ಬಾಗಲಕೋಟೆ– ಪಿ.ಸಿ.ಗದ್ದಿಗೌಡರ, ವೀಣಾ ಕಾಶಪ್ಪನವರ

3.ಬಾಗಲಕೋಟೆ ಕ್ಷೇತ್ರದ ಆಗುಹೋಗು

ಗುಲಬರ್ಗಾ– ಉಮೇಶ ಜಾಧವ್, ಮಲ್ಲಿಕಾರ್ಜುನ ಖರ್ಗೆ

4.ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ...

ಬೀದರ್–ಈಶ್ವರ ಖಂಡ್ರೆ,ಭಗವಂತ ಖೂಬಾ

5.ಬೀದರ್‌ ಕ್ಷೇತ್ರದ ಬಗ್ಗೆ

ದಾವಣಗೆರೆ– ಜಿ.ಎಂ.ಸಿದ್ದೇಶ್ವರ, ಮಂಜಪ್ಪ

6.ದಾವಣಗೆರೆ ಕ್ಷೇತ್ರದ ಕುರಿತು...

ಶಿವಮೊಗ್ಗ– ಮಧು ಬಂಗಾರಪ್ಪ, ಬಿ.ವೈ.ರಾಘವೇಂದ್ರ

7.ಶಿವಮೊಗ್ಗಅಖಾಡದಲ್ಲಿ...

ವಿಜಯಪುರ– ರಮೇಶ ಜಿಗಜಿಣಗಿ, ಸುನೀತಾ ಚವ್ಹಾಣ

8.ವಿಜಯಪುರಲೋಕಸಭಾ ಕ್ಷೇತ್ರದ ಬಗ್ಗೆ...

ಹಾವೇರಿ– ಶಿವಕುಮಾರ ಉದಾಸಿ, ಡಿ.ಆರ್.ಪಾಟೀಲ

9.ಹಾವೇರಿಕಣ ಹೀಗಿದೆ...

ಧಾರವಾಡ– ವಿನಯ ಕುಲಕರ್ಣಿ, ಪ್ರಹ್ಲಾದ ಜೋಶಿ

10.ಧಾರವಾಡಕ್ಷೇತ್ರದಲ್ಲಿ ಏನೆಲ್ಲಾ..?

ಉತ್ತರ ಕನ್ನಡ– ಅನಂತಕುಮಾರ ಹೆಗಡೆ, ಆನಂದ ಆಸ್ನೋಟಿಕರ್

11.ಉತ್ತರ ಕನ್ನಡಕಣದಲ್ಲಿ ಹೀಗೆಲ್ಲ...

ಬಳ್ಳಾರಿ– ಉಗ್ರಪ್ಪ, ದೇವೇಂದ್ರಪ್ಪ

12.ಬಳ್ಳಾರಿ ನಾಡಿನಲ್ಲಿ ಚುನಾವಣೆ

ವಿಡಿಯೊ ಲಿಂಕ್ಸ್

ರಾಯಚೂರು– ರಾಜಾ ಅಮರೇಶ್ವರ ನಾಯಕ, ಬಿ.ವಿ.ನಾಯಕ

13.ರಾಯಚೂರು ಲೋಕಸಭಾ ಕ್ಷೇತ್ರ

ಕೊಪ್ಪಳ– ಸಂಗಣ್ಣ ಕರಡಿ, ರಾಜಶೇಖರ ಹಿಟ್ನಾಳ

14.ಕೊಪ್ಪಳ ಕಣದ ಕುರಿತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.